ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಭಜನ್ ಸಾಮ್ರಾಟ್ ರಾಜ್ಯಮಟ್ಟಕ್ಕೆ ಆಯ್ಕೆ

Lingaraj Badiger
Updated On : 13 Feb 2013, 10:58 am

ರಾಯಚೂರು: ಶ್ರೀ ಶಂಕರವಾಹಿನಿಯಿಂದ ಇತ್ತೀಚೆಗೆ ಮಂತ್ರಾಲಯದ ರಮಣ ಕಲ್ಯಾಣ ಮಂಟಪದಲ್ಲಿ ಭಜನ್ ಸಾಮ್ರಾಟ್-2 ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶದ ಎಲ್ಲ ಜಿಲ್ಲೆಗಳ ತಂಡಗಳು ಭಾಗವಹಿಸಿದ್ದವು. ಸ್ಪರ್ಧೆಯ ನಿರ್ದೇಶಕರಾಗಿ ಶ್ರೀನಿವಾಸ್, ಟಿ.ಎಂ. ಬಾಲಕೃಷ್ಣ, ತೀರ್ಪುಗಾರರಾಗಿ ರಘುಪತಿ ಪೂಜಾರ್ ದಿನ್ನಿ ಮತ್ತು ಪರಿಮಳ ವ್ಯಾಸರಾವ್ ಪಾಲ್ಗೊಂಡಿದ್ದರು.
ಸ್ಪರ್ಧೆಯಲ್ಲಿ ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಸಂಜಯಾಚಾರ್ ನೇತೃತ್ವದ ಶ್ರೀಮಧ್ವ ಭಜನಾ ಮಂಡಳಿ ಪ್ರಥಮ ಸ್ಥಾನ ಗಳಿಸಿದರೆ, ರಾಯಚೂರಿನ ಶ್ರೀಕೃಷ್ಣ ಭಜನಾ ಮಂಡಳಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದವು. ಈ ವೇಳೆ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
 ಶ್ರೀಮಠದ ಸಹಾಯಕ ಆಡಳಿತ ವ್ಯವಸ್ಥಾಪಕ ಮಾಧವ ಶೆಟ್ಟಿ ಹಾಗೂ ವ್ಯವಸ್ಥಾಪಕ ಶ್ರೀಪತಿ ಅವರು ಸಮಾರಂಭದಲ್ಲಿ ಪಾಲ್ಗೊಂಡು ವಿಜೇತರಿಗೆ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement