ಕಾಲುವೆ ಜೋಡಣೆ ಬದಲಿಸಲು ಒತ್ತಾಯ
ಲಿಂಗಸ್ಗೂರು: ತಾಲೂಕಿನ ರಾಂಪೂರ ಏತನೀರಾವರಿ ಕಾಲುವೆ ಜೋಡಣೆ (ಅಲಾಯನ್‌ಮೆಂಟ್) ಬದಲಿಸುವಂತೆ ಒತ್ತಾಯಿಸಿ ಹಟ್ಟಿ ಹಾಗೂ ಕೋಠಾ ಗ್ರಾಮಸ್ಥರು ಸಹಾಯಕ ಆಯುಕ್ತರ ಕಚೇರಿ ಶಿರಸ್ತೇದಾರ ಭಾನುಮತಿ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.
ರಾಂಪುರ ಏತನೀರಾವರಿ ಕಾಲುವೆ ಗುಡದನಾಳ ಶಿವಾರದ ಜಮೀನುಗಳ ಮೂಲಕ ಹಟ್ಟಿ ಚಿನ್ನದ ಗಣಿಯ ಪಶ್ಚಿಮ ದಿಕ್ಕಿನ ಈಶಾನ್ಯ ಭಾಗದ ಕೋಠಾ ಮತ್ತು ಹಟ್ಟಿ ಶಿವಾರಗಳ ಜಮೀನುಗಳ ಮೂಲಕ ಕಾಲುವೆ ನಿರ್ಮಿಸಲು ಜೋಡಣೆ (ಆಲಾಯನ್‌ಮೆಂಟ್) ಮಾಡಲಾಗಿದೆ ಎಂದು ತಿಳಿದು ಬಂದಿದೆ. ಆದರೆ ಕೋಠಾ ಹಾಗೂ ಹಟ್ಟಿ ಗ್ರಾಮದ ಜಮೀನುಗಳನ್ನು ಹಟ್ಟಿ ಚಿನ್ನದಗಣಿ ಭೂಸ್ವಾಧೀನ ಮಾಡಬೇಕಿದೆ ಎಂದು ತಮ್ಮ ಕಾರ್ಯಾಲಯದಿಂದ ಪ್ರಕಟವಾಗಿರುತ್ತದೆ.
ಭೂ ಸ್ವಾಧೀನ: ರಾಂಪುರ ಏತನೀರಾವರಿ ಕಾಲುವೆಯ ಗುಡದನಾಳ ಶಿವಾರದ ಜಮೀನುಗಳ ಮೂಲಕ ಹಟ್ಟಿ ಚಿನ್ನದಗಣಿ ಪಶ್ಚಿಮ ದಿಕ್ಕಿನ ಕಡೆಯಿಂದ ಈಶಾನ್ಯ ದಿಕ್ಕಿನ ಕಡೆಗೆ ಕೋಠಾ ಮತ್ತು ಹಟ್ಟಿ ಶಿವಾರಗಳ ಜಮೀನುಗಳ ಮೂಲಕ ಹಾಯ್ದು ಹೋಗುವ ಕಾಲುವೆ ಅಲಾಯನ್‌ಮೆಂಟ್ ಹಟ್ಟಿ ಚಿನ್ನದ ಗಣಿಗಾಗಿ ಭೂಸ್ವಾಧೀನ ಮಾಡಬೇಕಾದ ಜಮೀನುಗಳ ಮಧ್ಯೆ ಹೋಗಿರುತ್ತದೆ. ಕಾರಣ ನೀರಾವರಿ ಇಲಾಖೆ ಹಾಗೂ ಹಟ್ಟಿ ಚಿನ್ನದ ಗಣಿ ಕಂಪನಿ ಅಧಿಕಾರಿಗಳು ಜಂಟಿ ಸರ್ವೆ ಮಾಡಿ ಹಟ್ಟಿ ಚಿನ್ನದ ಗಣಿಗಾಗಿ ಭೂಸ್ವಾಧೀನ ಮಾಡಿಕೊಂಡ ಜಮೀನುಗಳ ಮೇಲ್ಭಾಗದಿಂದ ಕಾಲುವೆ ಹಾಯ್ದು ಹೋಗುವಂತೆ ಜೋಡಣೆ ಮಾಡಲು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಹಟ್ಟಿ ನಾಗರಿಕ ರೈತ ಹೋರಾಟ ಸಮಿತಿ ಅಧ್ಯಕ್ಷ ಎನ್.ಸ್ವಾಮಿ, ಜಂಟಿ ಕಾರ್ಯದರ್ಶಿ ಎಸ್.ರಂಗನಾಥ, ಮುಖಂಡರಾದ ಗುರುಪಾದಪ್ಪ ನಾಯಿಕೊಡಿ, ರಾಮಣ್ಣ, ಸುನಿಲ್ ಕುಮಾರ, ಶರಣೋಜಿ ಪವಾರ, ಪ್ರಶಾಂತ ನಾಯಿಕೊಡಿ, ಉದಯ ಕುಮಾರ, ಸದಾನಂದ, ಶಂಕರ, ದೇವು, ಪರಶುರಾಮ, ಅಮರೇಶ, ಬಸವರಾಜ, ಗಂಗಾಧರ ಸೇರಿದಂತೆ ಇದ್ದರು.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.