23 ವಾರ್ಡುಗಳಲ್ಲಿ ಬಿಎಸ್ಸಾರ್ ಸ್ಪರ್ಧೆ
ದೇವದುರ್ಗ: ಇಲ್ಲಿನ ಪುರಸಭೆಯ 23 ವಾರ್ಡುಗಳಿಗೆ ಮಾ.7ರಂದು ನಡೆಯಲಿರುವ ಚುನಾವಣೆಯಲ್ಲಿ ಎಲ್ಲ ವಾರ್ಡುಗಳಲ್ಲಿ ಬಿಎಸ್‌ಆರ್ ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳು ಸ್ಪರ್ಧಿಸಲಿದ್ದಾರೆಂದು ಪಕ್ಷದ ಜಿಲ್ಲಾ ಸಹ ಸಂಚಾಲಕ ನಾಗಪ್ಪ ಪಾಮರತಿ ತಿಳಿಸಿದರು.
ಅವರು ಸೋಮವಾರ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ ಜನತೆ ಈಗಾಗಲೇ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಪಕ್ಷದವರನ್ನು ಆಯ್ಕೆ ಮಾಡಿದ್ದು, ಆ ಪಕ್ಷಗಳು ಅಭಿವೃದ್ಧಿ ಕಾರ್ಯ ಕೈಗೊಳ್ಳುವಲ್ಲಿ ವಿಫಲವಾಗಿರುವುದನ್ನು ಮನಗಂಡಿದ್ದಾರೆಂದು ಹೇಳಿದರು.
ಪಕ್ಷದಿಂದ ಸ್ಪರ್ಧಿಸಲು ಅನೇಕರು ಮುಂದೆ ಬಂದಿದ್ದು, ಪುರಸಭೆಯ ಎಲ್ಲ 23 ವಾರ್ಡುಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ತಿಳಿಸಿದರು. ಈ ವೇಳೆ ತಾಲೂಕು ಸಂಚಾಲಕ ಜಯಪ್ಪ ಗೌಡ, ತಾಲೂಕ ಯುವ ಅಧ್ಯಕ್ಷ ಕೆ. ವೆಂಕಟೇಶ ಗೌಡ, ಬಸ್ಸನಗೌಡ ಜಾಗೀರ ಜಾಡ್ಲದಿನ್ನಿ, ಆಂಜನೇಯ್ಯ ನಾಗಡದಿನ್ನಿ ಸೇರಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.