ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪ್ರಗತಿಗೆ ತಕ್ಕ ಪುರಸ್ಕಾರವಿದೆ: ಸಣ್ಣ ಕರಿಯಪ್ಪ

Lingaraj Badiger
Updated On : 19 Feb 2013, 11:14 am

ಸಿಂಧನೂರು: ವಿದ್ಯಾರ್ಥಿ ದೆಸೆಯಲ್ಲಿ ವಿದ್ಯಾರ್ಜನೆ ಮಾಡಿ ಜ್ಞಾನ ಸಂಪಾದಿಸಿದವರಿಗೆ ಸಮಾಜದಲ್ಲಿ ಯಾವಾಗಲೂ ಪುರಸ್ಕಾರ ಸಿಕ್ಕೇ ಸಿಗುತ್ತದೆ. ಆದ ಕಾರಣ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿ ಹೆತ್ತವರಿಗೆ, ಕಲಿಸಿದ ಗುರುಗಳಿಗೆ, ಸಮಾಜಕ್ಕೆ ಅಮೂಲ್ಯ ಆಸ್ತಿಗಳಾಗಿರಿ ಎಂದು ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ವಕೀಲರು ಸಲಹೆ ನೀಡಿದರು. ಬಾಲಕರ ಸರ್ಕಾರಿ ಪಪೂ ಕಾಲೇಜಿನಲ್ಲಿ 2012- 13ನೇ ಸಾಲಿನ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ಸಂವಿಧಾನದ 371(ಜೆ) ಕಲಂ ಜಾರಿಯಿಂದಾಗಿ ಪ್ರತಿಭಾವಂತರಿಗೆ ಬರುವ ದಿನಗಳಲ್ಲಿ ಹೆಚ್ಚಿನ ಉದ್ಯೋಗಾವಕಾಶಗಳು ದೊರೆಯಲಿವೆ. ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಗುರಿ ಸಾಧಿಸುವಂತೆ ಕಿವಿಮಾತು ಹೇಳಿದರು. ಕಾಲೇಜಿನ ಪ್ರಾಚಾರ್ಯ ಶರಣಯ್ಯ ಕೆ.ಎಂ. ಮಾತನಾಡಿ, ಪಿಯುಸಿ ಹಂತ ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ. ಸಮಯ ಹಾಳು ಮಾಡದೆ ಓದಿನಲ್ಲಿ ತೊಡಗಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಂತೆ ಮನವಿ ಮಾಡಿದರು. ರಾಮರೆಡ್ಡಿ ಕ್ಯಾಂಪ್‌ನ ಅಮರೇಗೌಡ ಪಗಡದಿನ್ನಿ, ಉಪನ್ಯಾಸಕರಾದ ಜಗದೀಶ, ವಿರುಪನಗೌಡ, ಕೊಟ್ರಬಸಪ್ಪ, ಶಿವಾನಂದ, ಸತ್ಯನಾರಾಯಣ, ಗುರುದೇವಿ, ಸುಮಿತ್ರ, ದೇವಕಿ ಪಾಲ್ಗೊಂಡಿದ್ದರು. ಸಂಗಪ್ಪ ಪ್ರಾರ್ಥಿಸಿದರು. ವೆಂಕಟೇಶ ನಿರೂಪಿಸಿದರು. ಗೋಪಾಲ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement