ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಜೆಪಿ ಮುಖಂಡರೊಂದಿಗೆ ಕೊಲ್ಲಾ ಶೇಷಗಿರಿರಾವ್ ಚರ್ಚೆ

Lingaraj Badiger
Updated On : 19 Feb 2013, 11:14 am

ಸಿಂಧನೂರು: ಸಿಂಧನೂರು ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಸ್ಪರ್ಧಿಸಲು ಆಕಾಂಕ್ಷಿಯಾಗಿರುವ ಕೊಲ್ಲಾ ನಾಗೇಶ್ವರರಾವ್ ಸ್ಥಳೀಯ ಬಿಜೆಪಿ ಮುಖಂಡರೊಂದಿಗೆ ರಹಸ್ಯ ಸಭೆ ನಡೆಸಿದ್ದಾರೆಂದು ತಿಳಿದು ಬಂದಿದೆ. ನಗರಸಭೆ ಚುನಾವಣೆಗೆ ಯೋಗ್ಯ ಅಭ್ಯರ್ಥಿಗಳನ್ನು ಹುಡುಕುವಂತೆ ಸ್ಥಳೀಯ ಮುಖಂಡರಿಗೆ ತಿಳಿಸಿರುವ ಅವರು, ಪಕ್ಷಕ್ಕೆ ಹೇರಳವಾಗಿ ನಿಧಿ ತರುವ ಭರವಸೆ ಕೊಟ್ಟಿದ್ದಾರೆಂದು ಗೊತ್ತಾಗಿದೆ. ನಗರಸಭೆ ಚುನಾವಣೆಯಲ್ಲಿ ಪಕ್ಷದಿಂದ ಅಧಿಕ ಅಭ್ಯರ್ಥಿಗಳನ್ನು ಗೆಲ್ಲಿಸುವ ಜವಾಬ್ದಾರಿಯನ್ನು ಪಕ್ಷದ ಅಧ್ಯಕ್ಷರಾದ ಕೆ.ಎಸ್. ಈಶ್ವರಪ್ಪ, ಮಾಜಿ ಸಿಎಂ ಸದಾನಂದಗೌಡ ತಮ್ಮ ಕೊರಳಿಗೆ ಕಟ್ಟಿರುವುದರಿಂದ ಸಹಕಾರ ನೀಡುವಂತೆ ಕೊಲ್ಲಾ ಶೇಷಗಿರಿರಾವ್ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ. ಸಭೆಯಲ್ಲಿ ಬಿಜೆಪಿ ಮುಖಂಡರಾದ ರಾಮಕೋಟೇಶ್ವರರಾವ್, ದೇವೇಂದ್ರಪ್ಪ ನಾಯಕ ಯಾಪಲಪರ್ವಿ, ನಯೋಪ್ರಾ ಮಾಜಿ ಅಧ್ಯಕ್ಷ ಈರೇಶ ಇಲ್ಲೂರು ವಕೀಲ, ರೌಡಕುಂದಾ ರಾಘವೇಂದ್ರರಾವ್ ಕುಲಕರ್ಣಿ  ಹಲವಾರು ಜನ ಯುವಕರು ಭಾಗವಹಿಸಿದ್ದರು ಎಂದು ಗೊತ್ತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement