ಭಾರತ್ ಬಂದ್ಗೆ ಕನ್ನಡ ಚಳವಳಿ ಬೆಂಬಲ
ಸಿಂಧನೂರು: ಫೆ.20, 21ರಂದು ಎಐಟಿಯುಸಿ ಕೈಗೊಂಡಿರುವ ಭಾರತ ಬಂದ್ಗೆ ಜನ ಸಂಪೂರ್ಣ ಬೆಂಬಲ ನೀಡುವುದಾಗಿ ಅಖಿಲ ಕರ್ನಾಟಕ ಚಳವಳಿ ಕೇಂದ್ರ ಸಮಿತಿರಾಜ್ಯ ಸಂಚಾಲಕ ಕೆ.ಬಾಳಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಐಟಿಯು: ಜಂಟಿ ಕಾರ್ಮಿಕ ಸಂಘಟನೆಗಳು ಮುಷ್ಕರ ಹಮ್ಮಿಕೊಂಡಿದ್ದು ಬೆಂಬಲಿಸುವಂತೆ ಸಿಐಟಿಯು ತಾಲೂಕ ಸಮಿತಿ ಮನವಿ ಮಾಡಿದೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿ ಕಾರ್ಯದರ್ಶಿ ನರಸಿಂಹಪ್ಪ, ಜಾಗತೀಕರಣ ಮತ್ತು ಖಾಸಗೀಕರಣ ನೀತಿಗಳು ಜಾರಿಗೆ ಬಂದ ಮೇಲೆ ದೇಶದ ಶೇ.80ರಷ್ಟು ಜನ ಸಮುದಾಯದ ಮೇಲೆ ದಾಳಿ ನಡೆದಿದೆ. ಗುತ್ತಿಗೆ ಆಧಾರದ ಮೇಲೆ ದುಡಿಸಿಕೊಳ್ಳತ್ತಾ ಕಾರ್ಮಿಕರನ್ನು ಉದ್ಯೋಗದಿಂದ ವಂಚಿಸಲಾಗಿದೆ ಎಂದು ಅವರು ಆಪಾದಿಸಿದ್ದಾರೆ.