ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನಾಳೆ ಸಾಮೂಹಿಕ ವಿವಾಹ

Mainashree
Updated On : 21 Feb 2013, 10:58 am

ಸಿಂಧನೂರು: ತಾಲೂಕಿನ ಗೌಡನಬಾವಿ ಗ್ರಾಮದಲ್ಲಿ ಮಾ.22ರಂದು ನಡೆಯಲಿರುವ ಕಟ್ಟೆ ಬಸವೇಶ್ವರ ಜಾತ್ರಾ ಮಹೋತ್ಸವದ ನಿಮಿತ್ತ 101 ಸಾಮೂಹಿಕ ವಿವಾಹ ಜರುಗಲಿವೆ ಎಂದು ಕಟ್ಟೆಬಸವೇಶ್ವರ ದೇವಸ್ಥಾನದ ಮಠಾಧಿಕಾರಿ ನಾಗಪ್ಪ ತಾತ ತಿಳಿಸಿದ್ದಾರೆ. ಅವರು ಈ ಕುರಿತು ಪತ್ರಿಕೆ ಹೇಳಿಕೆ ನೀಡಿ ಪ್ರತಿವರ್ಷದಂತೆ ಈ ವರ್ಷವೂ ವಿವಾಹಗಳನ್ನು ಏರ್ಪಡಿಸಲಾಗಿದೆ. ಸರ್ಕಾರಿ ನಿಯಮಗಳ ಪ್ರಕಾರ ವಧುವಿಗೆ 18 ವರ್ಷ, ವರನಿಗೆ 21 ವರ್ಷ ಕಡ್ಡಾಯವಾಗಿ ಇರಬೇಕು. ಆಸಕ್ತರು ತಲಾ 4 ಭಾವಚಿತ್ರಗಳನ್ನು, ವಾಸಸ್ಥಳ, ವಯಸ್ಸಿನ ಪ್ರಮಾಣ ಪತ್ರಗಳನ್ನು ಮಾ. 18ರೊಳಗಾಗಿ ಮಠದ ವ್ಯವಸ್ಥಾಪಕರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಬೇಕು. ಜಾತ್ರೆಯಂದು 108 ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವರಕ್ಕೆ ಮೊ. 99809 52479, 98806 60376ಕ್ಕೆ ಸಂಪರ್ಕಿಸಬಹುದು.
ಲಿಂಗಸ್ಗೂರು; ನಿಷೇಧಾಜ್ಞೆ
ರಾಯಚೂರು:  ನಾರಾಯಣಪುರ ಬಲದಂಡೆ ಲಿಂಗಸ್ಗೂರು ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶದಲ್ಲಿ ಫೆ. 21ರವರೆಗೆ ನಿಷೇಧಾಜ್ಞೆಯನ್ನು ಜಿಲ್ಲಾಧಿಕಾರಿ ನಾಗರಾಜು ಜಾರಿಗೊಳಿಸಿದ್ದಾರೆ. ಕಾಲುವೆ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಈ ನಿಷೇಧಾಜ್ಞೆ ಜಾರಿಗೊಳಿಸಿದ್ದು, ನೀರಾವರಿ ಇಲಾಖೆಯ ಹಿರಿಯ, ಕಿರಿಯ ಅಭಿಯಂತರರು, ಇತರ ನೀರಾವರಿ ಇಲಾಖೆಯ ಸಿಬ್ಬಂದಿ ತಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶದಲ್ಲಿದ್ದು ಕಾರ್ಯ ನಿರ್ವಹಿಸಲು ಸೂಚಿಸಿದ್ದಾರೆ. ಜಿಲ್ಲಾಧಿಕಾರಿಗಳ ಲಿಖಿತ ಪೂರ್ವಾನುಮತಿಯಿಲ್ಲದೇ ಕೇಂದ್ರ ಸ್ಥಾನ ಬಿಡದಂತೆ ಎಚ್ಚರಿಸಿದ್ದಾರೆ. ಕಂದಾಯ ಇಲಾಖೆಯ ಸಹಾಯಕ ಆಯುಕ್ತರು ಮತ್ತು ತಹಸೀಲ್ದಾರರು ತಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶದಲ್ಲಿದ್ದು ಕಾರ್ಯ ನಿರ್ವಹಿಸಲು ತಿಳಿಸಿದ್ದಾರೆ.
ನಗರಸಭೆ ಮೀಸಲಾತಿ
ಸಿಂಧನೂರು: ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿದ್ದು, ನಗರಸಭೆಯ ವಾರ್ಡ್ವಾರು ಮೀಸಲಾತಿ ಕೆಳಕಂಡಂತಿದೆ. 1- ಸಾಮಾನ್ಯ, 2- ಸಾಮಾನ್ಯ, 3- ಸಾಮಾನ್ಯ, 4- ಸಾಮಾನ್ಯ, 5- ಹಿಂದುಳಿದ ಅ ವರ್ಗ, 6-ಸಾಮಾನ್ಯ, 7-ಹಿಂದುಳಿದ ಅ ವರ್ಗ, 8- ಎಸ್ಟಿ(ಮಹಿಳೆ), 9- ಹಿಂದುಳಿದ ವರ್ಗ ಬ(ಮಹಿಳೆ), 10- ಸಾಮಾನ್ಯ(ಮಹಿಳೆ), 11- ಹಿಂದುಳಿದ ಬ ವರ್ಗ, 12- ಹಿಂದುಳಿದ ಅ ವರ್ಗ(ಮಹಿಳೆ), 13- ಸಾಮಾನ್ಯ, 14- ಸಾಮಾನ್ಯ(ಮಹಿಳೆ), 15- ಹಿಂದುಳಿದ ಅ ವರ್ಗ(ಮಹಿಳೆ), 16- ಸಾಮಾನ್ಯ(ಮಹಿಳೆ), 17- ಸಾಮಾನ್ಯ (ಮಹಿಳೆ),18-ಹಿಂದುಳಿದ ಅ ವರ್ಗ(ಮಹಿಳೆ), 19- ಸಾಮಾನ್ಯ, 20- ಸಾಮಾನ್ಯ(ಮಹಿಳೆ), 21- ಹಿಂದುಳಿದ ಅ ವರ್ಗ, 22- ಹಿಂದುಳಿದ ಅ ವರ್ಗ, 23- ಸಾಮಾನ್ಯ(ಮಹಿಳೆ), 24- ಸಾಮಾನ್ಯ, 25- ಸಾಮಾನ್ಯ, 26- ಎಸ್ಸಿ(ಮಹಿಳೆ), 27- ಎಸ್ಸಿ, 28- ಹಿಂದುಳಿದ ಅ ವರ್ಗ, 29- ಸಾಮಾನ್ಯ, 30- ಸಾಮಾನ್ಯ, 31- ಎಸ್ಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement