ಉಪ್ಪಾರ ಸಮಾಜದ ಪದಾಧಿಕಾರಿಗಳು
ರಾಯಚೂರು: ದೇವದುರ್ಗ ತಾಲೂಕು ಉಪ್ಪಾರ ಸಮಾಜ ಸೇವಾ ಸಂಘದ ನೂತನ ಪದಾಧಿಕಾರಿಗಳನ್ನು ಇತ್ತೀಚೆಗೆ ಆಯ್ಕೆ ಮಾಡಲಾಯಿತು.
ದೇವದುರ್ಗ ತಾಲೂಕಿನ ಮಾನಸಗಲ್ ರಂಗನಾಥ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಜಿಲ್ಲಾ ಉಪ್ಪಾರ ಸಮಾಜದ ಅಧ್ಯಕ್ಷ ವೈ.ಶ್ರೀಕಾಂತ ವಕೀಲರು ಅಧ್ಯಕ್ಷತೆಯಲ್ಲಿನ ಸಭೆಯಲ್ಲಿ ದೇವದುರ್ಗ ತಾಲೂಕು ಉಪ್ಪಾರ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷರಾಗಿ ಕೆ.ರಾಮಣ್ಣ, ಗೌರವಾಧ್ಯಕ್ಷರಾಗಿ ಮುಕ್ಕಣ್ಣ ವಕೀಲರು, ಉಪಾಧ್ಯಕ್ಷರಾಗಿ ತಿಮ್ಮಾರೆಡ್ಡಿ, ಮಾನಸಗಲ್, ರಂಗಯ್ಯ ಬುದ್ದಿನ್ನಿ, ರಂಗಯ್ಯ ತೆಗ್ಗಿಹಾಳ, ಹನುಮೇಶ್ ಮುಂಡರಗಿ, ಹನುಮಂತ್ರಾಯ ಸಲಿಕ್ಯಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಮೌನೇಶ್ ಸಾಗರ ಹಿರೇಬೂದೂರು, ಸಹ ಕಾರ್ಯದರ್ಶಿಯಾಗಿ ರಂಗಯ್ಯ ನಗರಗುಂಡ, ಹನ್ಮಂತ್ರಾಯ ಅರಕೇರಾ, ಕೋಶಾಧ್ಯಕ್ಷರಾಗಿ ಮಲ್ಲಿಕಾರ್ಜುನ ಖಾನಾಪೂರ, ಸಲಹೆಗಾರರಾಗಿ ಭೀಮಾಶಂಕರ್ ಜಂಬಲದಿನ್ನಿ, ಮಹಾಮುನಿಯಪ್ಪ, ಕಾನೂನು ಸಲಹೆಗಾರರಾಗಿ ಗೋವಿಂದಪ್ಪ ಬಂಡಿ ಅವರನ್ನು ಆಯ್ಕೆ ಮಾಡಲಾಯಿತು.
ಸಭೆಯಲ್ಲಿ ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎಲ್. ವೀರೇಶ್, ಎಸ್.ವೈ. ಜಟ್ಟರ್, ಭೀಮಯ್ಯ ಅವರನ್ನು ತಾಲೂಕು ಸಂಘದಿಂದ ಸನ್ಮಾನಿಸಲಾಯಿತು. ಸಭೆಯಲ್ಲಿ ದೇವದುರ್ಗ ತಾಲೂಕಿನ ವಿವಿಧ ಗ್ರಾಮಗಳ ಉಪ್ಪಾರ ಸಮಾಜದ ಬಾಂಧವರು ಪಾಲ್ಗೊಂಡಿದ್ದರು.