ನಗರ ಸ್ಥಳೀಯ ಸಂಸ್ಥೆಗಳಿಗೆ 107 ನಾಮಪತ್ರ ಸಲ್ಲಿಕೆ
ಯಾದಗಿರಿ: ಜಿಲ್ಲೆಯ ಎಲ್ಲ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಶುಕ್ರವಾರ ಒಟ್ಟು 107 ನಾಮಪತ್ರಗಳು ಸಲ್ಲಿಕೆಯಾಗಿವೆ. ಶನಿವಾರ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ಆದ್ದರಿಂದ ಶುಕ್ರವಾರ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು ಹಾಗೂ ಪಕ್ಷೇತರರಾಗಿಯೂ ಅನೇಕರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಯಾದಗಿರಿ ನಗರಸಭೆಗೆ 36, ಶಹಾಪುರ ಪುರಸಭೆಗೆ 27, ಸುರಪುರ ಪುರಸಭೆಗೆ 40 ಹಾಗೂ ಗುರುಮಠಕಲ್ ಪಟ್ಟಣ ಪಂಚಾಯ್ತಿಯಲ್ಲಿ 4 ಸೇರಿದಂತೆ 107 ನಾಮಪತ್ರಗಳು ಸಲ್ಲಿಕೆಯಾಗಿವೆ. ಇವುಗಳ ಪೈಕಿ ಕಾಂಗ್ರೆಸ್ನಿಂದ 25, ಬಿಜೆಪಿಯಿಂದ 9, ಜೆಡಿಎಸ್ನಿಂದ 10 ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ 63 ಜನರು ನಾಮಪತ್ರ ಸಲ್ಲಿಸಿದ್ದಾರೆ.
ಡಿಕ್ಕಿ; ಸವಾರ ಸಾವು
ಯಾದಗಿರಿ: ಬೈಕ್ ಹಾಗೂ ಟ್ರ್ಯಾಕ್ಟರ್ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಮುಂಡರಗಿ ಕ್ರಾಸ್ ಬಳಿ ಶುಕ್ರವಾರ ಸಂಭವಿಸಿದೆ. ತಾಲೂಕಿನ ಸೈದಾಪುರದ ನಿವಾಸಿ ನರೇಶ (23) ಮೃತಪಟ್ಟವ. ಬೈಕ್ನಲ್ಲಿದ್ದ ಸುನೀಲ ಎಂಬಾತನಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಯಾದಗಿರಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.