ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಪಾಶ್ಚಾತ್ಯ ಬಿರುಗಾಳಿಗೆ ದೇಸೀ ಸಂಸ್ಕೃತಿ

Mainashree
Updated On : 23 Feb 2013, 10:54 am

ರಾಯಚೂರು: ಪಾಶ್ಚಿಮಾತ್ಯ ರಾಷ್ಟ್ರಗಳ ಸಂಸ್ಕೃತಿ ವ್ಯಾಮೋಹದಲ್ಲಿ ಇಂದಿನ ಯುವಜನತೆ ನಮ್ಮ ದೇಶದ ಶ್ರೇಷ್ಠ ಸಂಸ್ಕೃತಿಯನ್ನು ಕಡೆಗಣಿಸುತ್ತಿದ್ದಾರೆ ಎಂದು ಮಾಜಿ ಶಾಸಕ ಎ.ಪಾಪರೆಡ್ಡಿ ವಿಷಾದ ವ್ಯಕ್ತಪಡಿಸಿದರು.
ಸ್ಥಳೀಯ ಎಸ್‌ಆರ್‌ಕೆ ಬಿಇಡಿ ಕಾಲೇಜಿನಲ್ಲಿ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯ ಸೇವೆಗಳ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಪಾಲಕರು ತಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಜೀವನ ನಡೆಸಲು ಶಾಲಾ-ಕಾಲೇಜಿಗೆ ಕಳುಹಿಸುತ್ತಾರೆ. ಆದರೆ ಸರಿಯಾದ ಕ್ರಮದ ಶಿಕ್ಷಣ ಇಲ್ಲದೆ ವಿದ್ಯಾರ್ಥಿಗಳು ಲೈಂಗಿಕ ಅತ್ಯಾಚಾರಗಳಂತಹ ಅಪರಾಧ ಮಾಡುತ್ತಿರುವುದು ರಾಷ್ಟ್ರದ ಬಹುದೊಡ್ಡ ದುರಂತ ಎಂದರು.
ಮಾನವೀಯ ಮೌಲ್ಯಗಳಿಗೆ ಒತ್ತು ಕೊಟ್ಟು ಹೆಣ್ಣುಮಕ್ಕಳನ್ನು ತಾಯಿ ಸ್ಥಾನದಲ್ಲಿ ಕಾಣುತ್ತಿರುವ ದೇಶದ ಸಂಸ್ಕೃತಿಯ ಮೌಲ್ಯಗಳು ಕುಸಿಯುತ್ತಿವೆ. ದೇಶದ ಸನಾತನ ಧರ್ಮದ ಮೌಲ್ಯಗಳನ್ನು ಪೋಷಿಸಿ ಬೆಳೆಸಬೇಕೆಂದು ಕರೆ ನೀಡಿದರು.
ತಿಳಿವಳಿಕೆ ಕೊರತೆ: ಚರ್ಮರೋಗ ತಜ್ಞ ಡಾ. ಸಿ.ಎನ್. ಕುಲ್ಕರ್ಣಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹದಿಹರೆಯದ ಯುವತಿಯರಿಗೆ ಸಂತಾನೋತ್ಪತ್ತಿ ಮತ್ತು ಲೈಂಗಿಕ ಆರೋಗ್ಯದ ಕುರಿತು ತಿಳಿವಳಿಕೆ ಇಲ್ಲದಾಗಿದ್ದು, ಸುರಕ್ಷಿತ ಗರ್ಭಪಾತ, ಸುರಕ್ಷಿತ ತಾಯಿತನ, ಸುರಕ್ಷಿತ ಲೈಂಗಿಕತೆ ಹಾಗೂ ಸೋಂಕು ರೋಗಗಳಾದ ಎಸ್‌ಟಿಐ, ಆರ್‌ಟಿಐ, ಎಚ್‌ಐವಿ ಕುಟುಂಬ ಯೋಜನೆ ಇತ್ಯಾದಿಗಳು ಬಗ್ಗೆ ಸರಿಯಾದ ಅರಿವು ಇಲ್ಲದೆ ಮದುವೆಯಾಗುತ್ತಿದ್ದರಿಂದ ತಮ್ಮಲ್ಲಿರುವ ಲೈಂಗಿಕ ಸಮಸ್ಯೆಗಳಿಂದ ನರಳುತ್ತಿದ್ದಾರೆ.
ಇವುಗಳ ಪರಿಣಾಮವಾಗಿ ಗರ್ಭಧಾರಣೆ ಸಮಯದಲ್ಲಿ, ಗರ್ಭಧಾರಣೆ ನಂತರ ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ವಿಕಲಾಂಗ ಮಕ್ಕಳು, ಕಡಿಮೆ ತೂಕದ ಮಕ್ಕಳು, ಅನಾರೋಗ್ಯ ಮಕ್ಕಳು, ನಿಸ್ತೇಜ ಅಬುದ್ಧಿವಂತ ಮಕ್ಕಳಿಗೆ ಜನ್ಮ ನೀಡುತ್ತಾರೆ. ಹೆರಿಗೆ ಸಮಯದಲ್ಲಿ ನೋವು ಸಹಿಸಲಾಗದ ಪರಿಸ್ಥಿತಿಯಲ್ಲಿ ಇಂದಿನ ಯುವತಿಯರಿದ್ದು, ಸಹಜ ಹೆರಿಗೆ ಕಣ್ಮರೆಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಿಬಿರದಲ್ಲಿ ಭಾರತೀಯ ಕುಟುಂಬ ಯೋಜನಾ ಸಂಘದ ಅಧ್ಯಕ್ಷ ಕೆ.ತಿಮ್ಮಯ್ಯ, ಕಾಲೇಜು ಪ್ರಾಚಾರ್ಯ ಆಶಾ ಪ್ರೇಮಲತಾ, ಲಲಿತ ಸತ್ಯಕುಮಾರ, ಭೀಮರಾಯ, ಭಾರತಿ, ಅಲಿಯಾ ಖಾನುಂ, ವೇಣುಗೋಪಾಲ ಸೇರಿದಂತೆ ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement