ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿದ್ಯಾರ್ಥಿ ಭವಿಷ್ಯ ಉಜ್ವಲವಾಗಲು ಮಾರ್ಗದರ್ಶನ ಅವಶ್ಯ: ಹುಡೇದ್

Mainashree
Updated On : 23 Feb 2013, 10:55 am

ಸಿಂಧನೂರು: ವಿದ್ಯಾವಂತ ಯುವಕ- ಯವತಿಯರ ಭವಿಷ್ಯ ಉಜ್ವಲವಾಗಲು ಮಾರ್ಗದರ್ಶನ ಅವಶ್ಯವಾಗಿದೆ ಎಂದು ಸಿಡಾಕ್ ಜಿಲ್ಲಾ ಕೈಗಾರಿಕಾ ತರಬೇತಿ ಕೇಂದ್ರದ ಅಧಿಕಾರಿ ಜಿ.ಯು. ಹುಡೇದ್ ತಿಳಿಸಿದರು.
ನಗರದ ಜೈನ್ ಕಲ್ಯಾಣ ಮಂಟಪದಲ್ಲಿ ಅಬ್ದುಲ್ ನಜೀರಸಾಬ ರಾಜ್ಯ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಮೈಸೂರು, ಜಿಲ್ಲಾ ಪಂಚಾಯಿತಿ ರಾಯಚೂರು ಹಾಗೂ ಕರ್ನಾಟಕ ಉದ್ಯಮಶೀಲಾಭಿವೃದ್ಧಿ ಕೇಂದ್ರ (ಸಿಡಾಕ್) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಸಿಂಧನೂರು ತಾಲೂಕಿನ ಹಿಂದುಳಿದ ಪ್ರದೇಶಾಭಿವೃದ್ಧಿ ಅನುದಾನ ನಿಧಿ (ಬಿಆರ್‌ಜಿಡಿ) ಯೋಜನೆ ಅಡಿಯಲ್ಲಿ ವಿದ್ಯಾವಂತ ಯುವಕ- ಯವತಿಯರಿಗಾಗಿ ಹಮ್ಮಿಕೊಂಡಿದ್ದ ಉಜ್ವಲ ಭವಿಷ್ಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.
ಸಮಾರಂಭವನ್ನು ಬಿಆರ್‌ಜಿಎಫ್ ಜಿಲ್ಲಾ ಸಂಯೋಜಕ ಟಿ.ಲಾರೆನ್ಸ್ ಉದ್ಘಾಟಿಸಿ ಮಾತನಾಡಿ, ಜಿಲ್ಲೆಯಲ್ಲಿ ಬಿಆರ್‌ಜಿಎಫ್ ಯೋಜನೆ ಅನುಷ್ಠಾನಗೊಳ್ಳುತ್ತಿರುವ ಬಗ್ಗೆ ವಿವರಿಸಿದರು. ಜೆ.ಸಿ. ಅಂತಾರಾಷ್ಟ್ರೀಯ ತರಬೇತಿದಾರ ಬಸವರಾಜ ಪಿ., ಕೆಜಿಎಫ್ ಶಿವಕುಮಾರ ರಾಘವೇಂದ್ರ ಹಾಗೂ ಕಾಲೇಜುಗಳ ಉಪನ್ಯಾಸಕರು ಪಾಲ್ಗೊಂಡಿದ್ದರು.
ಕು. ಪಾರ್ವತಿ ಪ್ರಾರ್ಥಿಸಿದರು. ಮೌನೇಶ ವಂದಿಸಿದರು. ಶ್ರೀಕಾಂತ ಪಾಟೀಲ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ 350ಕ್ಕೂ ಹೆಚ್ಚು ವಿದ್ಯಾವಂತ ಯುವಕ- ಯುವತಿಯರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement