ದೇವದುರ್ಗ ಪುರಸಭೆ: 99 ನಾಮಪತ್ರ
ದೇವದುರ್ಗ: ಸ್ಥಳೀಯ ಪುರಸಭೆಗೆ ಮಾ. 7ರಂದು ನಡೆಯಲಿರುವ ಚುನಾವಣೆಗಾಗಿ ಒಟ್ಟು 99 ನಾಮಪತ್ರಗಳು ಸಲ್ಲಿಕೆಯಾಗಿವೆ. ಕಾಂಗ್ರೆಸ್ ಪಕ್ಷ 31 ಜನ, ಬಿಜೆಪಿಯ 31, ಜೆಡಿಎಸ್ನ 19 ಜನ, ಬಿಎಸ್ಆರ್ ಕಾಂಗ್ರೆಸ್ನಿಂದ 8, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾದಿಂದ ಇಬ್ಬರು ಹಾಗೂ ಪಕ್ಷೇತರರಾಗಿ 8 ಜನ ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಇದುವರೆಗೆ ಒಟ್ಟು 99 ಜನ 31 ವಾರ್ಡುಗಳಿಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದಂತಾಗಿದೆ.
ಈ ಮಧ್ಯೆ ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾದ ಶನಿವಾರ 18ನೇ ವಾರ್ಡು ಎಸ್ಟಿಗೆ ಮೀಸಲಿದ್ದು, ಈ ಕ್ಷೇತ್ರದಿಂದ ಬಿಜೆಪಿಯ ರಂಗಪ್ಪ ಮರೆಯಪ್ಪ ಅವರು ಮಾತ್ರ ನಾಮಪತ್ರ ಸಲ್ಲಿಸಿದ್ದು, ಅವರು ಅವಿರೋಧ ಆಯ್ಕೆ ಖಚಿತವಾಗಿದೆ.
ಅತ್ತೆ ಸೊಸೆ ಕಣಕ್ಕೆ: ಪುರಸಭೆ ಚುನಾವಣೆಯ ವಾರ್ಡ್ 5ರ ಬಾಪೂಜಿ ಓಣಿಯಿಂದ ಮಾಜಿ ಶಾಸಕ ಯಲ್ಲಪ್ಪ ಅಕ್ಕರಕಿ ಅವರ ಪತ್ನಿ ಅಕ್ಕರಕಿ ಪೋಲಮ್ಮ ಯಲ್ಲಪ್ಪ ಅವರು ಬಿಜೆಪಿಯಿಂದ ಹಾಗೂ ಅವರ ಸೊಸೆ ತಾಯಮ್ಮ ಚಂದಪ್ಪ ಅಕ್ಕರಕಿ ಅವರು ಕಾಂಗ್ರೆಸ್ನಿಂದ ಸ್ಪರ್ಧಿಸಲು ತಮ್ಮ ನಾಮಪತ್ರ ಸಲ್ಲಿಸಿದ್ದಾರೆ. ಹೀಗಾಗಿ ಬಾಪೂಜಿ ಓಣಿಯ ವಾರ್ಡ್ ಐದು ಅತ್ತೆ- ಸೊಸೆಯ ರಾಜಕೀಯ ಕಾದಾಟದ ಕಣವಾಗಲಿದೆ.