ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಎಸ್‌ಆರ್ ಕಾಂಗ್ರೆಸ್, ಕೆಜೆಪಿಯಿಂದ ನಾಮಪತ್ರ

Mainashree
Updated On : 24 Feb 2013, 12:05 pm

ಸಿಂಧನೂರು: ನಗರದ ವಾಸವಿ ನಗರದ ವ್ಯಾಪ್ತಿಯಲ್ಲಿ ಬರುವ ವಾರ್ಡ್ ನಂ.30 ರಿಂದ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಹೊಸಗೇರಪ್ಪ ಭೀಮಣ್ಣ ಗೊರೇಬಾಳ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸೈಯ್ಯದ್ ವಲಿ ಮಿಟ್ಟಿಮನಿ, ಫಕೀರಪ್ಪ ಹೆಡಗಿನಾಳ, ಹನುಮಂತಪ್ಪ ಗೊರೇಬಾಳ, ಹುಸೇನಸಾಬ ಮುದುಗಲ್, ಶಿವಪ್ಪ, ಸಣ್ಣ ಮಲ್ಲಪ್ಪ ಮಾಡಗಿರಿ, ಶಿವಶಂಕರ ಗೊರೇಬಾಳ, ಹನುಮಂತ ಬಸಾಪುರ, ಜಿ.ಯಮನೂರಪ್ಪ, ಟಿ.ಮಹೇಶಕುಮಾರ, ಜಿ.ಬಸವರಾಜ, ಜಿ.ಈರಪ್ಪ, ರಾಮಣ್ಣ ಕೋಣದ, ಚಂದ್ರಶೇಖರ ರೆಡ್ಡಿ, ಮುದುಕಪ್ಪ ಬನ್ನದ, ಅಟಲ್ಸಾಬ, ಮಾಳಪ್ಪ ಮಾಡಗಿರಿ, ಶರಣಪ್ಪ ವಕೀಲರು ಇದ್ದರು.
6ನೇ ವಾರ್ಡ್‌ನಿಂದ ನಗರಸಭೆಗೆ ಚುನಾವಣೆಗೆ ಬಿಎಸ್‌ಆರ್ ಕಾಂಗ್ರೆಸ್ ಪಕ್ಷದಿಂದ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷರಾದ ಅಜಮೀರ್ ಸಾಬ ಎತ್ಮಾರಿ ಪುತ್ರ ಶೇಷಾವಲಿ ಎತ್ಮಾರಿ ನಾಮಪತ್ರ ಸಲ್ಲಿಸಿದರು.
ಗೋವಿಂದರಾವ ನಾಮಪತ್ರ: ನಗರದ ವಾರ್ಡ್ 3ರ ಕೆಜೆಪಿ ಅಭ್ಯರ್ಥಿಯಾಗಿ ಗೋವಿಂದರಾವ್ ಕುಲಕರ್ಣಿ ತಮ್ಮ ಅಪಾರ ಬೆಂಬಲಿಗರೊಡನೆ ನಗರಸಭೆ ಕಾರ್ಯಾಲಯದಲ್ಲಿ ನಾಮಪತ್ರ ಸಲ್ಲಿಸಿದರು.
ಗೋವಿಂದರಾವ್ ಅವರಿಗೆ ಸೂಚಕರಾಗಿ ನಾಗೇಶ್ವರರಾವ್ ಕುಲಕರ್ಣಿ, ರಾಘವೇಂದ್ರರಾವ್, ಅನುಮೋದಕರಾಗಿ ಹನುಮೇಶ ಜಾಗೀರದಾರ, ಮುಕ್ಬುಲ್ ಅಹ್ಮದ, ಗುಂಡಪ್ಪ ಸಹಿ ಮಾಡಿದರು. ಕೆ.ರಾಮಕೃಷ್ಣ, ನಾಗರಾಜ ಚೆನ್ನಳ್ಳಿ, ವೆಂಕಟರಾವ್ ಚನ್ನಳ್ಳಿ, ನರಸಿಂಹ ದೇಶಪಾಂಡೆ, ಸುಧಿಂದ್ರರಾವ್ ಕುಲಕರ್ಣಿ ಸೇರಿದಂತೆ ಹಲವಾರು ಅಭಿಮಾನಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement