ಮುದಗಲ್ ಪಪಂ: 4 ನಾಮಪತ್ರ ತಿರಸ್ಕೃತ
ಮುದಗಲ್: ಸ್ಥಳೀಯ ಪಟ್ಟಣ ಪಂಚಾಯಿತಿ ಚುನಾವಣೆಗೆ ನಾಮಪತ್ರ ಸಲ್ಲಿಕೆಯಾದ 77 ನಾಮಪತ್ರಗಳಲ್ಲಿ ನಾಲ್ಕು ತಿರಸ್ಕೃತವಾಗಿವೆ ಎಂದು ಎರಡೂ ಕಚೇರಿಗಳ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಶನಿವಾರ ನಾಮಪತ್ರಿಕೆಗೆ ದಿನ ಕೊನೆಯ ದಿನವಾಗಿತ್ತು. ನಾಮಪತ್ರ ಪರಿಷ್ಕರಣೆ ವೇಳೆ ವಾರ್ಡ್ ನಂ.3ಕ್ಕೆ ಸಲ್ಲಿಸಿದ್ದ ನಾಮಪತ್ರಕ್ಕೆ ರಾಜಮ್ಮ ಉಪ್ಪಾರ ಅವರು ಬಿ ಫಾರಂ ಅಳವಡಿಸಿರಲಿಲ್ಲ. ವಾಡ್ 8ಕ್ಕೆ ಸಲ್ಲಿಸಿದ್ದ ಮಹಿಬೂಬ ಪಾಷಾ ಮೀಸಲಾತಿ ನಿಗದಿಗೊಳಿಸಿದ್ದ ಬಿಸಿಎಂ(ಎ) ಬದಲಾಗಿ ಬಿಸಿಎಂ(ಬಿ) ಪ್ರಮಾಣ ಪತ್ರ ಲಗತ್ತಿಸಿದ್ದರಿಂದ ನಾಮಪತ್ರವನ್ನು ತಿರಸ್ಕರಿಸಲಾಗಿದೆ ಎಂದು ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾರ್ಡ್ 12ಕ್ಕೆ ಆಯ್ಕೆ ಬಯಸಿ ಜೆಡಿಎಸ್‌ನಿಂದ ನಾಮಪತ್ರ ಸಲ್ಲಿಸಿದ್ದ ಸತ್ಯಪ್ಪ ವಡ್ಡರ ಬಿ ಫಾರಂ ಲಗತ್ತಿಸದ ಕಾರಣ, ಅದೇ ರೀತಿ ವಾರ್ಡ್ 15ಕ್ಕೆ ಅನುರಾಧಾ ಪರಶುರಾಮ ಜೆಡಿಎಸ್‌ನಿಂದ ಸಲ್ಲಿಸಿದ ನಾಮಪತ್ರಕ್ಕೂ ಬಿ ಫಾರಂ ಸಲ್ಲಿಸದೇ ಇರುವುದರಿಂದ ಸೂಚಕರ ಕೊರತೆಯ ಸಲುವಾಗಿ ನಾಮಪತ್ರ ತಿರಸ್ಕರಿಸಲಾಗಿದೆ.
ಇದರಿಂದ ಇನ್ನೂ ಕಣದಲ್ಲಿ 73 ನಾಮಪತ್ರ ಉಳಿದಿವೆ. ಇಂದಿನಿಂದ ನಾಮಪತ್ರ ಹಿಂತೆಗೆದುಕೊಳ್ಳುವ ದಿನ ಪ್ರಾರಂಭವಾಗಿದ್ದು, ಕೊನೆ ಗಳಿಗೆಯಲ್ಲಿ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯುವರು ಎನ್ನುವದನ್ನು ಕಾದು ನೋಡಬೇಕು.