ವಿದ್ಯುತ್ ಪರಿವರ್ತಕ ಬದಲಿಸಲು ಒತ್ತಾಯ
ರಾಯಚೂರು: ನಗರದ ಹರಿಜನವಾಡ ಪ್ರದೇಶದಲ್ಲಿ ವಿದ್ಯುತ್ ಪರಿವರ್ತಕ ದುರಸ್ತಿಗೀಡಾಗಿ ವಾರ ಕಳೆದರೂ ಜೆಸ್ಕಾಂ ಅಧಿಕಾರಿಗಳು ಬದಲಾಯಿಸಿಲ್ಲ ಎಂದು ನವರತ್ನ ಯುವಕ ಸಂಘ ಆರೋಪಿಸಿದೆ.
ಈ ಕುರಿತು ಜೆಸ್ಕಾಂ ಅಧಿಕಾರಿಗಳಿಗೆ ಸೋಮವಾರ ದೂರು ಸಲ್ಲಿಸಿರುವ ಸಂಗದ ಪ್ರಮುಖರು, ಕಳೆದೊಂದು ವಾರದ ಹಿಂದೆ ಹರಿಜನವಾಡ ಪ್ರದೇಶದಲ್ಲಿನ ವಿದ್ಯುತ್ ಪರಿವರ್ತಕ ಸುಟ್ಟಿದೆ. ಇದರಿಂದ ನಿವಾಸಿಗಳು ಮತ್ತು ವಿದ್ಯಾರ್ಥಿಗಳಿಗೆ ಪರೀಕ್ಷೆಯ ಸಮಯದಲ್ಲಿ ತೊಂದರೆಗೆ ದಾರಿಯಾಗಿದೆ ಎಂದು ದೂರಿದ್ದಾರೆ.
ಕಾರಣ ಜೆಸ್ಕಾಂ ಅಧಿಕಾರಿಗಳು ಕೂಡಲೇ ಸುಟ್ಟಿರುವ ಪರಿವರ್ತಕಗಳನ್ನು ಬದಲಿಸಿ ಸಮರ್ಪಕ ವಿದ್ಯುತ್ ಒದಗಿಸುವಂತೆ ಸಂಘದ ಪ್ರಮುಖರಾದ ಎಸ್.ಹುಲಿಗೆಪ್ಪ ಮತ್ತಿತರರು ಒತ್ತಾಯಿಸಿದ್ದಾರೆ.
ದೇವಸೂಗೂರು;
ಅಕ್ರಮ ಸೇಂದಿ ಜಪ್ತಿ
ರಾಯಚೂರು: ತಾಲೂಕಿನ ದೇವಸೂಗೂರು ಗ್ರಾಮದಲ್ಲಿ ಅಕ್ರಮವಾಗಿ ಸೇಂದಿ ಮಾರಾಟ ಮಾಡಲು ಸಾಗಿಸುತ್ತಿದ್ದ ಐವರನ್ನು ಬಂಧಿಸಿದ ಪೊಲೀಸರು ಅವರಿಂದ 50 ಲೀಟರ್ ಸೇಂದಿ ಜಪ್ತಿ ಮಾಡಿದ್ದಾರೆ. ಬಂಧಿತರನ್ನು ಹನುಮಂತ, ಜಂಗ್ಲೆಪ್ಪ, ಬಸಪ್ಪ, ಮರಿಲಿಂಗ ಹಾಗೂ ರಾಜು ಎಂದು ಗುರುತಿಸಲಾಗಿದೆ. ಇವರು ಆಂಧ್ರದಿಂದ ಅನಧಿಕೃತವಾಗಿ ಸೇಂದಿ ಸಾಗಣೆ ಮಾಡುತ್ತಿದ್ದ ವೇಳೆ ದಾಳಿ ಮಾಡಿದ ಪೊಲೀಸರು ಆರೋಪಿಗಳನ್ನು ಬಂದಿಸಿ ಅವರಿಂದ 50ಲೀಟರ್ ಸೇಂದಿ ಜಪ್ತಿ ಮಾಡಿದ್ದಾರೆ. ಈ ಕುರಿತು ಶಕ್ತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.