ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

20ನೇ ವಾರ್ಡ್‌ಗೆ ಅವಿರೋಧ ಆಯ್ಕೆ

Rashmi Kasaragodu
Updated On : 28 Feb 2013, 12:12 pm

ಲಿಂಗಸ್ಗೂರು: ಸ್ಥಳೀಯ ಪುರಸಭೆ ಚುನಾವಣೆ ಮಾ.7ರಂದು ನಡೆಯಲಿದ್ದು, ಆದರೆ ಕಾಂಗ್ರೆಸ್ ಅಭ್ಯರ್ಥಿ ತಮ್ಮ ನಾಮಪತ್ರ ಹಿಂದಕ್ಕೆ ಪಡೆದ ಪ್ರಯುಕ್ತ ಜೆಡಿಎಸ್ ಅಭ್ಯರ್ಥಿ ಅವಿರೋಧವಾಗಿ ಆಯ್ಕೆಗೊಂಡಿದ್ದು, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು.
ಪುರಸಭೆಯ 20ನೇ ವಾರ್ಡಿಗೆ ಕಾಂಗ್ರೆಸ್ ಬೆಂಬಲಿತ ಕುಪ್ಪಣ್ಣ ಹನುಮಪ್ಪ ಯತಗಲ್ ಹಾಗೂ ಜೆಡಿಎಸ್ ಬೆಂಬಲಿತ ಬಸವರಾಜ ನಾಗಪ್ಪ ಯತಗಲ್ ನಾಮಪತ್ರ ಸಲ್ಲಿಸಿದ್ದರು.
ನಾಮಪತ್ರ ಹಿಂಪಡೆಯುವ ಕೊನೆಯ ದಿನವಾದ ಫೆ.27ರಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕುಪ್ಪಣ್ಣ ಯತಗಲ್ ನಾಮಪತ್ರ ವಾಪಸ್ ಪಡೆದ ಪ್ರಯುಕ್ತ ಅಂತಿಮವಾಗಿ ಜೆಡಿಎಸ್ ಬೆಂಬಲಿತ ಬಸವರಾಜ ನಾಗಪ್ಪ ಯತಗಲ್ ಉಳಿದಿದ್ದು, 20ನೇ ವಾರ್ಡಿಗೆ ಅವಿರೋಧವಾಗಿ ಆಯ್ಕೆಗೊಂಡಿರುತ್ತಾರೆ.
ಸಂಭ್ರಮ: ಪಟ್ಟಣದ ಗಡಿಯಾರ ಚೌಕ್ ವೃತ್ತದಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು.
ಮುಖಂಡರಾದ ಗಿರಿಮಲ್ಲನಗೌಡ ಕರಡಕಲ್, ಶರಣಪ್ಪ ಗೋನವಾರ, ಯಮನೂರಪ್ಪ ಭೋವಿ, ದಾದಾಪೀರ, ಸೋಮಲಿಂಗಪ್ಪ, ಶಂಭುಲಿಂಗಪ್ಪ, ಅಬ್ದುಲ್ ವಹಿದ್, ಶಿವಾನಂದ ಐದನಾಳ, ಈರಣ್ಣ ಹುರಕಡ್ಲಿ, ಶಿವಕುಮಾರ, ಹುಲಗಪ್ಪ   ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement