ಆರೋಗ್ಯ ಅರಿವು ಕಾರ್ಯಕ್ರಮ ಯಶಸ್ವಿ
ರಾಯಚೂರು: ನಗರದ ಎಸ್ಎಸ್ಎಂ ಮಹಾವಿದ್ಯಾಲಯದಲ್ಲಿ ಈಚೆಗೆ ವಿದ್ಯಾರ್ಥಿನಿಯರಿಗೆ ಆರೋಗ್ಯ ಅರಿವು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಮಾರಂಭದಲ್ಲಿ ಜಿಲ್ಲಾ ಆಯುಷ್ ಕಚೇರಿಯ ವೈದ್ಯಾಧಿಕಾರಿ ಡಾ. ರೂಪಾ ಫಡ್ನೀಸ್ ಮಾತನಾಡಿ, ಮಾನವ ಶಾರೀರಿಕ, ಮಾನಸಿಕ, ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನನೀಡಬೇಕು. ಸಾತ್ವಿಕ ಆಹಾರ ಸೇವನೆ, ಆಧ್ಯಾತ್ಮಿಕ ವಿಚಾರಗಳ ಅರಿಯುವಿಕೆಯ ಮೂಲಕ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಸ್.ಎ. ಮಾಲಿ ಪಾಟೀಲ್, ಆರೋಗ್ಯವಂತ ಸಮಾಜ ನಿರ್ಮಾಣ ಎಲ್ಲರ ಗುರಿಯಾಗಬೇಕು. ಅದಕ್ಕಾಗಿ ವೈಯಕ್ತಿಕ ಆರೋಗ್ಯದ ಸುರಕ್ಷೆಗೆ ಗಮನಹರಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದಲ್ಲಿ ಯುವರೆಡ್ ಕ್ರಾಸ್ ಘಟಕದ ನೋಡಲ್ ಅಧಿಕಾರಿ ಶ್ರೀನಿವಾಸ ರಾಯಚೂರುಕರ್ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.