ಕಾಲೇಜು ವಾರ್ಷಿಕೋತ್ಸವ
ಗುಲ್ಬರ್ಗ: ಹೆಣ್ಣು ಮಕ್ಕಳಿಗೆ ಶಿಕ್ಷಣ ದೊರೆತರೆ ಒಂದು ಕುಟುಂಬವೇ ಅಭ್ಯಾಸ ಮಾಡಿದಂತೆ ಎಂದು ಬಸವರಾಜ ಎಸ್. ದೇಶಮುಖ ಹೇಳಿದರು.
ನಗರದ ಶರಣಬಸವೇಶ್ವರ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯ ಹಾಗೂ ಮುಕ್ತಾಂಬಿಕಾ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮಹಿಳಾ ಮಹಾವಿದ್ಯಾಲಯದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಾರ್ಷಿಕೋತ್ಸವದಲ್ಲಿ ಮಾತನಾಡಿ, ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ದೊಡ್ಡಪ್ಪ ಅಪ್ಪ ಅವರು ಸ್ಥಾಪಿಸಿದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ ಎಂದು ಬಣ್ಣಿಸಿದರು.
ಶರಣಬಸಪ್ಪ ಅಪ್ಪ ಆಶೀರ್ವಚನ ನೀಡಿ, ಹಳ್ಳಿಯಿಂದ ನಮ್ಮ ಕಾಲೇಜುಗಳಿಗೆ ಬಂದಂತಹ ವಿದ್ಯಾರ್ಥಿಗಳಿಗೆ ಕೇವಲ ಕಲಿಸುವುದು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ವತಂತ್ರವಾಗಿ ವಿಚಾರಿಸಿ, ಮಾತನಾಡುವ ಸಾಮರ್ಥ್ಯ ಈ ಸಂಸ್ಥೆಯಲ್ಲಿ ನೀಡಲಾಗುತ್ತಿದೆ. ಹೆಚ್ಚಿನ ಶಿಕ್ಷಣ ನೀಡುವ ಉದ್ದೇಶದಿಂದ 4 ಎಂಜಿನಿಯರಿಂಗ್ ಕಾಲೇಜು ಪ್ರಾರಂಭಿಸಲಾಗಿದೆ ಎಂದರು.
ಅತಿಥಿಗಳಾಗಿ ಡಾ. ಉಮಾ ಬಿ. ದೇಶಮುಖ, ಅತಿಥಿ ಉಪನ್ಯಾಸಕರಾಗಿ ಆಗಮಿಸಿದ ಡಾ. ಅನಿಲಕುಮಾರ ಬಿಡವೆ ಮಾತನಾಡಿದರು.
ಪ್ರಾಚಾರ್ಯ ವಿ.ಎಸ್. ಗಣಪತಿ ಸ್ವಾಗತಿಸಿದರು.
ಪ್ರೊ. ಸರಸ್ವತಿ ಶೆಟಗಾರ ವಾರ್ಷಿಕ ವರದಿ ವಾಚಿಸಿದರು. ಆಶಾ ಗೋಗಿ ನಿರೂಪಿಸಿದರು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕರು ಹಾಗೂ ಸಿಬ್ಬಂದಿ ಆಯೋಜಿಸಲಾಗಿದ್ದ ಕಾಲೇಜು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.