ನಕಲಿ ಮತದಾರರು ಸೇರ್ಪಡೆ; ಆರೋಪ
ಸಿಂಧನೂರು: ನಗರದ ಜನತಾ ಕಾಲೋನಿ ಬಡಾವಣೆಯ ವಾರ್ಡ್ ನಂ.25ರಲ್ಲಿ ಭಾಗ ಸಂಖ್ಯೆ- 104 ಮತ್ತು 103ರಲ್ಲಿ 568 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಅದರಲ್ಲಿ 302 ಮತದಾರರು ಆ ವಾರ್ಡ್ಗೆ ಸಂಬಂಧಿಸಿಯೇ ಇಲ್ಲ. ಆದರೂ ಹೇಗೆ ಸೇರ್ಪಡೆ ಮಾಡಿದ್ದೀರೆಂ ದು ಕಾಂಗ್ರೆಸ್, ಜೆಡಿಎಸ್, ಕೆಜೆ ಪಿ, ಬಿಎ ಸ್ಸಾರ್ ಮತ್ತು ಸಿಪಿ ಎಂ ಮುಖಂಡರು ಚುನಾವಣಾ ಶಿರಸ್ತೇದಾರರನ್ನು ತರಾಟೆಗೆ ತೆಗೆದುಕೊಂಡರು.
ವಾರ್ಡ್ನಲ್ಲಿ ಸಭೆ ಮಾಡಿ 302 ಮತದಾರರು ಯಾರೆಂದು ಹುಡುಕಿದರೂ ಒಬ್ಬರೂ ಸಿಗಲಿಲ್ಲ. ಎಲ್ಲರೂ ಒಗ್ಗಟ್ಟಾಗಿ ಚುನಾವಣಾಧಿಕಾರಿಗಳ ವಿರುದ್ಧ ಹರಿಹಾಯ್ದರು. ಯಾರೋ ನಕಲಿ ಮತದಾರರನ್ನು ಸೇರ್ಪಡೆ ಮಾಡಿದ್ದಾರೆಂದು ಎಲ್ಲ ಪಕ್ಷಗಳ ಮುಖಂಡರು ಆರೋಪಿಸಿದರು.
ರದ್ದುಪಡಿಸಲು ಆಗ್ರಹ: ಲಿಂಗಸ್ಗೂರು ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಗಳು ಸೇರ್ಪಡೆಯಾಗಿರುವ ಮತದಾರರನ್ನು ತಕ್ಷಣ ಮತದಾರರ ಪಟ್ಟಿಯಿಂದ ರದ್ದುಪಡಿಸಬೇಕೆಂದು ಪಕ್ಷಾತೀತವಾಗಿ ಒತ್ತಾಯಿಸಿದ್ದಾರೆ.
ಕೆಜೆಪಿ ಪಕ್ಷದ ಮೌನೇಶ ಚವ್ಹಾಣ, ಕಾಶಿ, ದೇವರಾಜ, ಶ್ರೀಧರ ಮತ್ತು ಪ್ರಶಾಂತ ಅವರು ತಾವು ಅದೇ ವಾರ್ಡ್ನ ಮತದಾರರಾಗಿದ್ದು, 302 ಜನ ಮತದಾರರ ಹೆಸರುಗಳೇ ಈ ವಾರ್ಡ್ನಲ್ಲಿ ಇಲ್ಲ. ಇಂತಹವರನ್ನು ಕೂಡಲೇ ರದ್ದುಪಡಿಸಬೇಕು. ಇಂತಹ ಪಿತೂರಿ ವಿರುದ್ಧ ಉಗ್ರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಚುನಾವಣಾಧಿಕಾರಿಗಳ ಕಚೇರಿ ಮುಂದೆ ಧರಣಿ ಮಾಡಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.