ಹಿಂದೂ ಜನಜಾಗೃತಿ ಸಮಿತಿಗೆ ಆಯ್ಕೆ
ಸಿಂಧನೂರು: ಸ್ಥಳೀಯ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ನಗರದ ಶ್ರೀರಾಮ ಮಂದಿರದಲ್ಲಿ ನೈತಿಕ ಶಿಕ್ಷಣ, ಧರ್ಮಾಚರಣೆಯ ಮಹತ್ವ ಮತ್ತು ಸ್ವಸಂರಕ್ಷಣಾ ಪ್ರಶಿಕ್ಷಣದ ಅವಶ್ಯಕತೆಯ ಬಗ್ಗೆ ಮಾರ್ಗದರ್ಶನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಂಗಳೂರಿನ ಅಶ್ವಿನಿ ಪ್ರಭು, ಬಾಗಲಕೋಟೆಯ ವೆಂಕಟರಮಣ ನಾಯಕ ಮತ್ತು ರಾಯಚೂರಿನ ಕೃಷ್ಣವೇಣಿಯವರು ಕಾರ್ಯಕರ್ತರಿಗೆ ಮಾರ್ಗದರ್ಶನ ಮಾಡಿದರು.
ಇದೇ ಸಂದರ್ಭದಲ್ಲಿ ಎಂ.ಸಿ. ಸೀತಮ್ಮ ಅವರನ್ನು ಹಿಂದೂ ಜನಜಾಗೃತಿ ಸಮಿತಿಯ ಮಹಿಳಾ ಸಮನ್ವಯಕಾರನ್ನಾಗಿ ಆಯ್ಕೆ ಮಾಡಲಾಯಿತು. ಸಮಿತಿಯ ತಾಲೂಕಾ ಸಮನ್ವಯಕ ಮಧ್ವರಾಜ ಆಚಾರ್ಯ, ಬಂಗಾಳಿ ಕ್ಯಾಂಪ್ ಹಿಂದೂ ಜನಜಾಗೃತಿ ಸಮಿತಿಯ ಸಮನ್ವಯಕ ಬೊಧನ್ ಚಕ್ರವರ್ತಿ, ಗುರುರಾಜ ಜಾಗೀರದಾರ, ಗಂಗೂಬಾಯಿ ಬಂಡಿ, ರಾಧಾಬಾಯಿ ಕಲ್ಲೂರು, ರಂಗಮ್ಮ, ಮಹಾದೇವಿ ಮತ್ತಿತರರು ಉಪಸ್ತಿತರಿದ್ದರು. ಎಂ.ಸಿ. ಸೀತಮ್ಮ ಅವರಿಗೆ ಕೆ.ಬಾಳಪ್ಪ, ಅವಿನಾಶ ದೇಷಪಾಂಡೆ, ವೆಂಕಟೇಶ ಕಟ್ಟಿಮನಿ, ನಾಗೇಶ ಜಾಲಗಾರ ಮತ್ತಿತರರು ಅಭಿನಂದನೆ ಸಲ್ಲಿಸಿದ್ದಾರೆ.