ಕಾನೂನು ಅರಿವು-ನೆರವು ಸಪ್ತಾಹ ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಶಶಿಧರ
ಸಿಂಧನೂರು: ಸಮಾಜದಲ್ಲಿ ಕೌಶಲ್ಯ ರಹಿತರ ಕಾರ್ಮಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ ಕರೆ ನೀಡಿದರು.
ಅವರು ಸ್ಥಳೀಯ ನ್ಯಾಯಾಲಯದ ವಕೀಲರ ಸಭಾಂಗಣದಲ್ಲಿ ಗುರುವಾರ ಕೌಶಲ್ಯರಹಿತ ಕಾರ್ಮಿಕರ ಕಾನೂನು ಅರಿವು-ನೆರವು ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಆರ್.ವೈ. ಶಶಿಧರ ಮಾತನಾಡಿದರು.
ಹಲವಾರು ಯೋಜನೆಗಳ ಬಗ್ಗೆ ಸರಿಯಾದ ತಿಳುವಳಿಕೆ ಇಲ್ಲದ ಕಾರಣ ಕೌಶಲ್ಯ ರಹಿತರ ಕಾರ್ಮಿಕರು ಮುಂದೆ ಬರಲು ಅಸಾಧ್ಯವಾಗಿದೆ ಆದುದ್ದರಿಂದ ಕೌಶಲ್ಯದ ಬಗ್ಗೆ ಮಾಹಿತಿಯುಳ್ಳವರು ಕೌಶಲ್ಯರಹಿತ ಕಾರ್ಮಿಕರಿಗೆ ಮಾಹಿತಿ ನೀಡುವುದರಿಂದ ಅನುಕೂಲವಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಪ್ರಧಾನ ಸಿವಿಲ್ ನ್ಯಾಯಾಧೀಶ ಪಿ.ಜೆ. ಸೋಮಶೇಖರ, ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಸರ್ಕಾರಿ ಸಹಾಯಕ ಅಭಿಯೋಜಕ ಶೇಖರಪ್ಪ ಶಾಲಿಗನೂರ, ಕಾರ್ಯದರ್ಶಿ ಖಾಜಿಮಲಿಕ್ ಇದ್ದರು. ಆನಂದಗೌಡ ವಕೀಲರು ನಿರೂಪಿಸಿದರು. ಕೆ.ವೀರನಗೌಡ, ಕೆ. ಅಮರೇಗೌಡ ಉಪನ್ಯಾಸ ನೀಡಿದರು.