ಖದರೀಯಾ ಕಾಲೋನಿಯ 20 ಜನ ಬಿಜೆಪಿಗೆ
ಸಿಂಧನೂರು: ನಗರದ ವಾರ್ಡ್ ನಂ.15 ಖದರಿಯಾ ಕಾಲೋನಿಯ ವೀರೇಶ್ ಹಿರೇಮಠ ನೇತೃತ್ವದಲ್ಲಿ ಸುಮಾರು 20 ಜನ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು.
ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್ ಮುಖಂಡರಾದ ಆರ್. ತಿಮ್ಮಯ್ಯ, ಉಮೇಶ್ ಸಜ್ಜನ್ ಪಕ್ಷಕ್ಕೆ ಸ್ವಾಗತಿಸಿದರು. ಮುಖಂಡರಾದ ಶೇಷಗಿರಿರಾವ್, ತಾಲೂಕಾಧ್ಯಕ್ಷ ಅಮರೇಗೌಡ ವಿರೂಪಾಪುರ, ನ.ಯೋ.ಪ್ರಾ. ಅಧ್ಯಕ್ಷ ಎನ್. ಶಿವನಗೌಡ ಗೊರೇಬಾಳ. ನ.ಯೋ.ಪ್ರಾ. ಮಾಜಿ ಅಧ್ಯಕ್ಷ ವೀರೇಶ್ ಇಲ್ಲೂರ್, ದೇವೆಂದ್ರಪ್ಪ ಯಾಪಲಪರ್ವಿ,ರಾಮಕೋಟೇಶ್ವರ ರಾವ್ ಮತ್ತಿತರರು ಉಪಸ್ಥಿತರಿದ್ದರು.