ಕಲಂ 371(ಜೆ): ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ವಿಜಯೋತ್ಸವ
ಸಿಂಧನೂರು: ಸಂವಿಧಾನದ 371(ಜೆ) ಕಲಂ ಜಾರಿ ಹಿನ್ನೆಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆ ಹಾಗೂ ಕಾಲೇಜು ಆಡಳಿತ ಮಂಡಳಿಯಿಂದ ನಗರದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು ಒಳಗೊಂಡ ವಿಜಯೋತ್ಸವ ಬೃಹತ್ ಮೆರವಣಿಗೆ ನಡೆಯಿತು. ಶಾಸಕ ವೆಂಕಟರಾವ ನಾಡಗೌಡ, ಮಾಜಿ ಸಂಸದ ಕೆ.ವಿರೂಪಾಕ್ಷಪ್ಪ, ಬಿಎಸ್ಸಾರ್ ಮುಖಂಡ ಕೆ.ಕರಿಯಪ್ಪ, ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ಎನ್.ಶಿವನಾಗಪ್ಪ, ವೈ.ನಾಗೇಂದ್ರ, ಆರ್.ಸಿ. ಪಾಟೀಲ್, ಕನಕದಾಸ ಕಾಲೇಜ್, ನ್ಯಾಷನಲ್ ಕಾಲೇಜು, ಶ್ರೀಆದಿತ್ಯ ವಾಣಿಜ್ಯ ಕಾಲೇಜು, ವಿಜಡಮ್ ಕಾಲೇಜು, ಎಕ್ಸಲೆಂಟ್, ಸಂಕೇತ, ಅನಿಕೇತನ, ಆಕ್ಸ್ಫರ್ಡ್, ಕರ್ನಾಟಕ, ಆರ್ಜಿಎಂ, ವಿಕಾಸ ಭಾರತಿ, ಮೀನಾಕ್ಷಿ, ಇಂದಿರಾ ಪ್ರಿಯದರ್ಶಿನಿ, ರಾಜೇಂದ್ರ, ಶ್ರೀಕೃಷ್ಣದೇವರಾಯ, ಅಂಬಾದೇವಿ, ಎಲ್ಬಿಕೆ, ಹೋಲಿ ಫ್ಯಾಮಿಲಿ, ಸರ್ವೋದಯ, ಸೃಷ್ಠಿ, ಡಾ. ತಿಮ್ಮನಗೌಡ ಪ್ರೌಢಶಾಲೆ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.