ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಂಡೋರಾ ಕಾಲ್ನಡಿಗೆ ಜಾಥಾಕ್ಕೆ ಚಾಲನೆ

Mainashree
Updated On : 26 Jan 2013, 12:26 pm

ಲಿಂಗಸ್ಗೂರು: ಮಾದಿಗ ದಂಡೋರಾ, ಮಾದಿಗ ಮೀಸಲಾತಿ ಜಿಲ್ಲಾ ಸಮಿತಿಯಿಂದ ಲಿಂಗಸ್ಗೂರು ಪಟ್ಟಣದಿಂದ ರಾಯಚೂರು ಜಿಲ್ಲಾ ಕೇಂದ್ರದವರೆಗೆ ಹಮ್ಮಿಕೊಂಡ ಕಾಲ್ನಡಿಗೆ ಜಾಥಾಕ್ಕೆ ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಎನ್. ವಿಜಯರಾಣಿ ಸಿರವಾರ ಚಾಲನೆ ನೀಡಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದೀಪ ಬೆಳಗಿಸಿ ಮಾತನಾಡಿದ ಅವರು, ನ್ಯಾ.ಸದಾಶಿವ ಆಯೋಗವು ಒಳಮೀಸಲಾತಿಗೆ ಸಂಬಂಧಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ ನಂತರ ಮುಖ್ಯಮಂತ್ರಿಗಳು ಅಧಿವೇಶನದ ಸದನದಲ್ಲಿ ಚರ್ಚೆಗೊಳಪಡಿಸದೆ. ಮಾದಿಗ ಸಮಾಜದ ಒಳಮೀಸಲಾತಿ ಬಗ್ಗೆ ಯಾವುದೆ ಚಕಾರವೆತ್ತದೆ ದಲಿತ ವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು. ದೇಶಾದ್ಯಂತ ಮಹಿಳೆಯರ ಮೇಲೆ ಅದರಲ್ಲೂ ಗ್ರಾಮೀಣ ಮಟ್ಟದ ದಲಿತ ಮಹಿಳೆಯರ ಮೇಲೆ ನಡೆಯುವ ಅತ್ಯಾಚಾರ, ದೌರ್ಜನ್ಯ ಖಂಡಿಸಿ ಕಾಲ್ನಡಿಗೆ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಸದಸ್ಯೆ ಪುಷ್ಪಾ ಪಾಮಯ್ಯ ಮುರಾರಿ, ಪಿಎಸ್‌ಐ ಸಿದ್ಧರಾಮಯ್ಯ, ಎಪಿಎಂಸಿ ನಿರ್ದೇಶಕ ಗ್ಯಾನಪ್ಪ ಕಟ್ಟಿಮನಿ, ಪುರಸಭೆ ಸದಸ್ಯ ರುದ್ರಪ್ಪ ಬ್ಯಾಗಿ, ಪತ್ರಕರ್ತ ಶಿವರಾಜ ಕೆಂಭಾವಿ, ಮುಖಂಡರಾದ ಸಿದ್ರಾಮಪ್ಪ, ಹನುಮಂತ ತವಗ, ನರಸಪ್ಪ, ಹುಲಗಪ್ಪ ಕೆಸರಟ್ಟಿ ಸೇರಿದಂತೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement