ಮಕ್ಕಳ ಸಾಹಿತ್ಯ ಸಮ್ಮೇಳನ; ಸಮಿತಿ (ಸುದ್ದಿ ಸಂಕ್ಷೇಪ)
ಯಾದಗಿರಿ: ನಗರದಲ್ಲಿ ಫೆ.16ರಂದು ನಡೆಯಲಿರುವ ಜಿಲ್ಲಾ ಎರಡನೇ ಮಕ್ಕಳ ಸಾಹಿತ್ಯ ಸಮ್ಮೇಳನ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಕರೆದ ಸಭೆಯಲ್ಲಿ ಸಮ್ಮೇಳನದ ಯಶಸ್ಸಿಗಾಗಿ ವಿವಿಧ ಸಮಿತಿ ರಚಿಸಲಾಯಿತು. ಉದ್ಯಮಿ ಬಂದಪ್ಪ ಅರಳಿ- ಅಧ್ಯಕ್ಷ, ಶ್ರೀನಿವಾಸ ಕರ್ಲಿ- ಉಪಾಧ್ಯಕ್ಷ, ಮಲ್ಲಿಕಾರ್ಜುನ ಬಿಳಾರ- ಪ್ರಧಾನ ಕಾರ್ಯದರ್ಶಿ, ಬಸವರಾಜ ಗೊಂದಳೆ, ಜ್ಞಾನೇಶ್ವರ ಸಂದೇನ್ಕರ್, ಸುರೇಶ ತಡಿಬಿಡಿ, ಅಶೋಕ ಕೆಂಭಾವಿ, ಅನಿಲ ಕುಮಾರ, ಪ್ರಕಾಶ ಅಂಗಡಿ, ಬಸರೆಡ್ಡಿ ಎಂ.ಟಿ. ಪಲ್ಲಿ- ಸಂಘಟನಾ ಕಾರ್ಯದರ್ಶಿ, ಮೊಗಲಪ್ಪ ನಾಯ್ಕಿನ್- ಖಜಾಂಚಿ, ಈಶ್ವರಪ್ಪ, ಅನಿಲಕುಮಾರ, ಡಾ. ಸಿದ್ದಲಿಂಗರೆಡ್ಡಿ ಮನೋಹರ ಬಡಿಗೇರಿ- ಆಹಾರ ಸಮಿತಿ, ಸೂಗಪ್ಪ ಪಾಟೀಲ್, ರಾಘವೇಂದ್ರ, ಬಸವರಾಜ ಅಳೆಮನಿ- ಕಲಾ ಜಾಥಾ ಮೆರವಣಿಗೆ ಸಮಿತಿ, ಶಂಕರ ಸೋನಾರ, ಮಲ್ಲೇಶ ಕುರಕುಂದಿ, ಮಲ್ಲಿಕಾರ್ಜುನ ಕೌಲಿ, ವಿಜಯಲಕ್ಷ್ಮಿ, ಬಸನಗೌಡ ಬಿರಾದಾರ- ಸಾಂಸ್ಕೃತಿಕ ಕಾರ್ಯಕ್ರಮ ನಿರ್ವಹಣಾ ಸಮಿತಿ, ಶಂಕರಗೌಡ ಪಾಟೀಲ್, ಕಾಂತಪ್ಪ ಬಾಗಲಿ, ಮಲ್ಲಯ್ಯ, ಹಣಮಂತ ಹೊಸಮನಿ, ಶ್ರೀನಿವಾಸ ಗುಂಟಿ, ಗೊಲ್ಲಾಳಪ್ಪ ಪತ್ತಾರ- ಶಿಸ್ತು ಪಾಲನಾ ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು. ಸಲಹಾ ಸಮಿತಿಯ ಮಾರ್ಗದರ್ಶಕರಾಗಿ ಸಿ.ಎಂ. ಪಟ್ಟೇದಾರ ಹಾಗೂ ಬಸವರಾಜ ಅವರನ್ನು ನೇಮಿಸಲಾಗಿದೆ ಎಂದು ಗುರುಮಠಕಲ್‌ನ ಪ್ರಯೋಗ ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಬಿ. ನಾಯ್ಕಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.