ಸಂವಿಧಾನದ ಜ್ಞಾನ ಎಲ್ಲರಿಗೂ ಅಗತ್ಯ: ಬಿ. ಹನುಮೇಶ
ಸಿಂಧನೂರು: ಗಣರಾಜ್ಯೋತ್ಸವ ಆಚರಿಸುವುದು ಎಷ್ಟು ಮುಖ್ಯವೋ ದೇಶದ ಬುನಾದಿಯಾದ ಸಂವಿಧಾನ ಅರಿತುಕೊಳ್ಳುವುದು ಅಷ್ಟೇ ಅಗತ್ಯ ಎಂದು ಎಸ್ಡಿಎಂಸಿ ಅಧ್ಯಕ್ಷ ಬಿ.ಹನುಮೇಶ ಹೇಳಿದರು. 64ನೇ ಶನಿವಾರ ಗಣರಾಜೋತ್ಸವದಂದು ನಗರದ ಸುಕಾಲಪೇಟೆ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿ, ಇಂದು ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ಜಾರಿಗೆ ತಂದ ದಿನವಾಗಿದ್ದು, ಸಂವಿಧಾನ ತಿಳಿಯುವುದು ದೇಶದ ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲೆಯ ಮುಖ್ಯಗುರು ಅನಂತರಾವ್ ವಹಿಸಿದ್ದರು. ಎಸ್ಡಿಎಂಸಿ ಸದಸ್ಯ ದೊರೆಸ್ವಾಮಿ.ಬಿ, ಪ್ರಾ.ಶಾ.ಶಿ. ಸಂಘದ ಉಪಾಧ್ಯಕ್ಷ ಶಿಕ್ಷಕರಾದ ಮಲ್ಲಪ್ಪ ಬಿ., ಚಂದ್ರಶೇಖರ, ಪವನ್, ತುಳಸಿಬಾಯಿ ಸುಜಾತ ಭಾಗವಹಿಸಿದ್ದರು.
ಸನ್ಮಾನ: ಇತ್ತೀಚೆಗೆ ಬೆಂಗಳೂರು ಪ್ರೆಸ್ಕ್ಲಬ್ ವತಿಯಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದ ಶಿಕ್ಷಕ ಅಂಬೋಜಿ ಪವಾರ್ ಅವರನ್ನು ಶಾಲೆಯ ಶಿಕ್ಷಕರು, ಎಸ್ಡಿಎಂಸಿ ಆತ್ಮೀಯವಾಗಿ ಸನ್ಮಾನಿಸಿದರು.