ಸಿಂಧನೂರು; 'ವಸತಿ' ಆದೇಶ ಪತ್ರ ವಿತರಣೆ
ಸಿಂಧನೂರು: ನಗರದ ಮಹೆಬೂಬ್ ಕಾಲೋನಿಯ ವಾರ್ಡ್ 23ರಲ್ಲಿ 2012- 13ನೇ ಸಾಲಿನ ನಗರ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆ ಮಂಜೂರಾತಿ ಮತ್ತು ಕಾಮಗಾರಿ ಆದೇಶ ಪತ್ರವನ್ನು ಶಾಸಕ ವೆಂಕಟರಾವ್ ನಾಡಗೌಡ ಭಾನುವಾರ ವಿತರಣೆ ಮಾಡಿದರು.
ನಂತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರತಿಯೊಬ್ಬರು ಸರ್ಕಾರದಿಂದ ಬರುವಂತಹ ಸೌಲಭ್ಯಗಳನ್ನು ಸದುಪಯೋಗ ಪಡೆದುಕೊಳ್ಳಬೇಕು. ಬಡ ಕುಟುಂಬದವರಿಗೆ ಕಡ್ಡಾಯವಾಗಿ ಮನೆ ವಿತರಣೆ ಮಾಡಲಾಗುತ್ತದೆ. ಇದು ಸರ್ಕಾರದ ಆದೇಶವಾಗಿರುತ್ತದೆ. ಪ್ರತಿ ಮನೆಗಳಿಗೆ 15 ಸಾವಿರ ವೆಚ್ಚದ ಶೌಚಾಲಯ ನಿರ್ಮಿಸಿ ಕೊಡಲಾಗುವುದು. ಈಗಾಗಲೇ ನಗರದಲ್ಲಿ ಕುಡಿವ ನೀರು, ಸಿಸಿ ರಸ್ತೆ, ಮತ್ತಿತರ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಹೇಳಿದರು.
ಪೌರಾಯುಕ್ತ ನಾಸೀರ್ ಅಲಿ, ನಗರಸಭೆ ಉಪಾಧ್ಯಕ್ಷ ಎಂ.ಡಿ. ನದೀಮುಲ್ಲಾ, ಮಾಜಿ ಅಧ್ಯಕ್ಷೆ ಪದ್ದಮ್ಮ ಕರಿಯಪ್ಪ, ಮಾಜಿ ಉಪಾಧ್ಯಕ್ಷ ಮಹೆಬೂಬ್, ಮುಖಂಡರಾದ ಅಶೋಕಗೌಡ ಗದ್ರಟಗಿ, ಜಾವೇದ್ ಹುಸೇನ ದೇಸಾಯಿ ವಕೀಲರು, ಸಾಯಿಕೃಷ್ಣ, ಅಯ್ಯನಗೌಡ ಆಯನೂರ್ ಮತ್ತಿತರರು ಇದ್ದರು.
--