ಜೆರಾಕ್ಸ್ ಅಸೋಸಿಯೇಷನ್ ಅಸ್ತಿತ್ವಕ್ಕೆ
ಸಿಂಧನೂರು: ತಾಲೂಕ ಅಸೋಸಿಯೇಷನ್ ಅಧ್ಯಕ್ಷರಾಗಿ ಲಕ್ಷ್ಮಣರಾವ್ ಕುಲಕರ್ಣಿ ಆಯ್ಕೆಯಾಗಿದ್ದಾರೆಂದು ನೂತನ ಕಾರ್ಯದರ್ಶಿ ಅನಿಲಕುಮಾರ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಜೆರಾಕ್ ಮಾಡುವ ಮಷಿನ್‌ಗಳು, ಸಾಮಗ್ರಿಗಳು ವಿದ್ಯುತ್ ಶುಲ್ಕ, ಮಷಿನ್ನಿನ ಬಿಡಿಭಾಗಗಳು, ನಿರ್ವಹಣಾ ವೆಚ್ಚ, ಮಳಿಗೆ ಬಾಡಿಗೆ ನಿರಂತರವಾಗಿ ಏರುತ್ತಿದ್ದರೂ ಸಹ ಜೆರಾಕ್ಸ್ ಅಂಗಡಿಯವರು ದರವನ್ನು ಏರಿಸಿರಲಿಲ್ಲ. ಆದರೆ ಕೆಲವರು ಅತಿಕಡಿಮೆ ದರದಲ್ಲಿ ಜೆರಾಕ್ ಪ್ರತಿಗಳನ್ನು ಗ್ರಾಹಕರಿಗೆ ಮಾಡಿಕೊಡುತ್ತಿದ್ದರಿಂದ ಸಣ್ಣಪುಟ್ಟ ವ್ಯಾಪಾರಸ್ಥರಿಗೆ ತೀವ್ರ ತೊಂದರೆಯಾಗಿತ್ತು. ಆದ್ದರಿಂದ ಸ್ಥಳೀಯ ಪ್ರವಾಸಿ ಮಂದಿರದಲ್ಲಿ ಜೆರಾಕ್ಸ್ ಅಂಗಡಿಗಳ ಸುಮಾರು 40ಮಾಲೀಕರ ಸಭೆ ಕರೆದು ನೂತನವಾಗಿ ಸಂಘವನ್ನು ರಚಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಪ್ರಭಾಕರ, ಸಹಕಾರ್ಯದರ್ಶಿ ಯಂಕನ ಗೌಡ, ಖಜಾಂಚಿ ಮಲ್ಲಿಕಾರ್ಜುನ (ಎಂ.ಕೆ), ಕಾನೂನು ಸಲಹೆಗಾರ ತಿಮ್ಮನಗೌಡ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸತೀಶರೆಡ್ಡಿ, ಮೋಹಿನ್ ಪಾಷ, ನೀಲಕಂಠ ದೊಡ್ಡಮನಿ, ರಂಗನಾಥರಾವ್, ಯಾಕೂಬ್, ಪವನ್ ದೇಸಾಯಿ ಆಯ್ಕೆಯಾಗಿದ್ದಾರೆ.