ವಸ್ತು ಪ್ರದರ್ಶನಕ್ಕೆ ಚಾಲನೆ
ರಾಯಚೂರು: ಲಿಂಗಸ್ಗೂರು ತಾಲೂಕಿನ ಅಮರೇಶ್ವರದ ಪ್ರೌಢಶಾಲೆಯಲ್ಲಿ ವೃತ್ತಿ ಶಿಕ್ಷಣದ ವಸ್ತು ಪ್ರದರ್ಶನವನ್ನು ಇತ್ತೀಚೆಗೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಿಡಿಪಿಐ ಪರಮೇಶ್ವರ್, ವೃತ್ತಿ ಶಿಕ್ಷಣ ಪ್ರತಿಯೊಬ್ಬರ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ. ಕಾರಣ ವಿದ್ಯಾರ್ಥಿಯ ಸ್ವಾವಲಂಬನೆಯ ಬದುಕಿಗೆ ವೃತ್ತಿ ಶಿಕ್ಷಣ ಪ್ರಾಮುಖ್ಯತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ನಿರಂತರ ಅಧ್ಯಯನದಿಂದ ಜೀವನದಲ್ಲಿ ಯಶಸ್ಸು ಸಾಧಿಸುವಂತೆ ಸಲಹೆ ನೀಡಿದರು. ಜಿಲ್ಲಾ ವೃತ್ತಿ ಶಿಕ್ಷಕರ ಸಂಘದ ಅಧ್ಯಕ್ಷ ಪಾಂಡುರಂಗ ದೇಸಾಯಿ, ಸಹಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಾಬುಭಂಡಾರಿಗಲ್, ವೃತ್ತಿ ಶಿಕ್ಷಣ ಪರಿವೀಕ್ಷಕಿ ಹೀರಾಬಾಯಿ, ಶಿಕ್ಷಕ ಮರಿಯಪ್ಪ, ಬಿಇಒ ಎಸ್.ಎನ್. ಪೊಲೀಸ್ ಪಾಟೀಲ್ ಮಾತನಾಡಿದರು. ಸಮಾರಂಭದಲ್ಲಿ ವಿಷಯ ಪರಿವೀಕ್ಷಕ ಹನುಮಂತಪ್ಪ ಗವಾಯಿ, ಎಂ.ಎಂ. ದೊಡ್ಡಮನಿ, ಅರುಣಕುಮಾರ್ ದೇಸಾಯಿ, ಮಲ್ಲಿಕಾರ್ಜುನ, ಹುಸೇನಸಾಬ್ ಅನೇಕರಿದ್ದರು.