ಅನರ್ಹರ ಮನೆ ಹಂಚಿಕೆ ತಡೆಗೆ ಕರವೇ ಆಗ್ರಹ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ 9ನೇ ವಾರ್ಡಿನ ನಿವಾಸಿಗಳು ಖೊಟ್ಟಿ ದಾಖಲೆ ಸೃಷ್ಟಿಸಿ ವಸತಿ ಮನೆಗಳನ್ನು ಪಡೆದಿದ್ದು, ಕೂಡಲೆ ಇದನ್ನು ರದ್ಧುಪಡಿಸಿ ನಿಜವಾದ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ತಹಶೀಲ್ದಾರ ರಾಚಪ್ಪ ಸಮೇದರಿಗೆ ಬುಧವಾರ ಮನವಿ ಸಲ್ಲಿಸಿದರು.
ಸರ್ಕಾರದಿಂದ ಇಂದಿರಾ ಆವಾಸ ಯೋಜನೆಯಡಿ 2011-12 ನೇ ಸಾಲಿನಲ್ಲಿ ಆಯ್ಕೆಗೊಂಡ ಫಲಾನುಭವಿಗಳ ಪೈಕಿ ಲಿಂಗಸ್ಗೂರು ಪಟ್ಟಣದ 9ನೇ ವಾರ್ಡ್‌ನ ರಾಜಾಭಕ್ಷಾ ಓಣಿಯ ನಿವಾಸಿಗಳಾದ ಹಫೀದಾಬೇಗಂ ದಾದಾಸಾಬ ಹಾಗೂ ಆರೀಫ್ ಬೇಗಂ ಅಬ್ದುಲ್ ಶಾಹಿದ್ ಎಂಬುವರು ಕರಡಕಲ್ ತಾಂಡಾದ ನಿವಾಸಿಗಳೆಂದು ಸುಳ್ಳು ದಾಖಲೆ ಸೃಷ್ಟಿಸಿ ವಸತಿ ಮನೆಗಳಿಗೆ ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ಮೋಸವೆಸಗಿದ್ದಾರೆ. ಇದರಲ್ಲಿ ಅಧಿಕಾರಿಗಳು ಶಾಮೀಲಾಗಿದ್ದು, ಕೂಡಲೆ ಮಂಜೂರಾತಿ ರದ್ದುಪಡಿಸಿ, ಮೋಸವೆಸಗಿದವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕರವೇ ಐದನಾಳ ಘಟಕದ ಅಧ್ಯಕ್ಷ ರುದ್ರಯ್ಯಸ್ವಾಮಿ, ಬಲರಾಮ, ಶಿವರಾಜ ನಾಯಕ, ಆಂಜನೇಯ ಭಂಡಾರಿ, ಅಜೀಜ್ ಪಾಷಾ, ರವಿಕುಮಾರ ಬರಗುಡಿ, ಬಿ.ಎಸ್.ನಾಯಕ, ಅಮರೇಶ ನಾಯಕ, ವೀರೇಶ ಐದನಾಳ, ಪಂಪಯ್ಯ ಐದನಾಳ, ಮಹಾಂತೇಶ ಐದನಾಳ, ಅಮರೇಶ ಐದನಾಳ, ಕಂಠೆಪ್ಪ ಐದಾಳ, ರಮೇಶ ದೊರೆ ಸೇರಿದಂತೆ ಇದ್ದರು.