ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ರಂಗಕಲೆ ಗ್ರಾಮೀಣ ಪ್ರದೇಶದಲ್ಲಿ ಜೀವಂತ'

Rashmi Kasaragodu
Updated On : 31 Jan 2013, 11:33 am




ಸಿಂಧನೂರು: ಮಾನವೀಯ ಮೌಲ್ಯಗಳ ನೆಲೆಯಾಗಿರುವ ಗ್ರಾಮೀಣ ಪ್ರದೇಶದಲ್ಲಿ ರಂಗಭೂಮಿ ಕಲೆ ಇನ್ನೂ ಜೀವಂತವಾಗಿದೆ ಎಂದು ಸಮುದಾಯ ಸಂಘಟನೆಯ ಅಧ್ಯಕ್ಷ ಎಂ.ಗೋಪಾಲಕೃಷ್ಣ ಹೇಳಿದರು.
ನಗರದ ಅನಿಕೇತನ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಏರ್ಪಡಿಸಿದ್ದ ದಿ. ಚಂದ್ರಶೇಖರಪ್ಪಗೌಡ ನಟೇಕಲ್ ಸ್ಮರಣಾರ್ಥ 'ರಂಗಭೂಮಿ ಮತ್ತು ಸಮಾಜ' ದತ್ತಿ ಉಪನ್ಯಾಸಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಂಗಭೂಮಿ ಕಲೆಯನ್ನು ಕರಗತ ಮಾಡಿಕೊಂಡು ನಾಟಕದಲ್ಲಿ ಪಾತ್ರಗಳಿಗೆ ಜೀವ ತುಂಬುವ ಮಹತ್ವದ ಕಾರ್ಯ ಮಾಡುವವರೇ ನಿಜವಾದ ಕಲಾವಿದರೆನಿಸುತ್ತಾರೆ. ನಾಟಕಗಳು ಒಡಕು- ಕೆಡಕುಗಳನ್ನು ಪ್ರಭಾವಯುತವಾಗಿ ಬಿಂಬಿಸುತ್ತವೆ. ಅಲ್ಲದೆ, ನೈತಿಕ ಮೌಲ್ಯಗಳನ್ನು ಕಾಪಾಡುತ್ತಿದ್ದು ಇತ್ತೀಚಿನ ಸಾಮಾಜಿಕ ನಾಟಕಗಳಲ್ಲಿ ಅಶ್ಲೀಲತೆ ಹೆಚ್ಚಾಗಿರುವುದು ವಿಷಾದನೀಯ ಎಂದರು.
ನಾಟಕ ಕಲಾವಿದರನ್ನು ಸದಾ ಬೆನ್ನು ತಟ್ಟುತ್ತಿದ್ದ ದಿ. ಚಂದ್ರಶೇಖರಪ್ಪಗೌಡ ಮಹಾನ್ ಕಲಾ ಪೋಷಕರಾಗಿದ್ದರು ಎಂದು ರಂಗಭೂಮಿ ಹಿರಿಯ ಕಲಾವಿದ ಪಿ.ಹುಸೇನಪ್ಪ ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಚಾರ್ಯ ವೈ.ಎಚ್. ರಕ್ಕಸಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷೆ ರಮಾದೇವಿ ಶಂಭೋಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಿ ದಾನಿಗಳಾದ ಉಪನ್ಯಾಸಕ ಗುರುಪ್ಪ ಹೇಮವಾಡಗಿ, ಕಸಾಪ ಗೌರವ ಸಲಹೆಗಾರ ಸೈಯದ್ ಖದರ್ ಸುಬಾನಿ ಮತ್ತಿತರರು ಪಾಲ್ಗೊಂಡಿದ್ದರು. ಲೀಲಾ ಪ್ರಾರ್ಥಿಸಿದರು. ತಿಮ್ಮಣ್ಣ ಸ್ವಾಗತಿಸಿದರು. ನಾಗರತ್ನಮ್ಮ ಬಂಗಾರಶೆಟ್ಟಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement