ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಿಂಧನೂರು; ಫೆ.3ರಂದು ಸಾರ್ವಜನಿಕ ಪ್ರವಚನ

Rashmi Kasaragodu
Updated On : 31 Jan 2013, 11:28 am




ಸಿಂಧನೂರು: ನಗರದ ಆರ್‌ಜಿಎಂ ಮೈದಾನದಲ್ಲಿ ಫೆ.3ರಂದು ಸಂಜೆ 6.30ಗಂಟೆಗೆ ಪೀಸ್ ಫಾರ್ ಹ್ಯುಮಾನಿಟಿ  ಎಜ್ಯುಕೇಷನ್, ಚಾರಿಟೇಬಲ್ ಟ್ರಸ್ಟ್‌ನಿಂದ ವಿಶ್ವಕ್ಕೆ ಶಾಂತಿಯ ಸಂದೇಶ ಸಾರ್ವಜನಿಕ ಪ್ರವಚನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮಂಗಳೂರಿನ ಇಬ್ರಾಹಿಂ ಖಲೀಲ್ ಅವರು ವೇದಗ್ರಂಥಗಳಲ್ಲಿ ಪ್ರವಾದಿ ಮಹ್ಮದ್ ಕುರಿತು ಹಾಗೂ ಬೆಂಗಳೂರು ಡಯಟ್ ಅಧ್ಯಕ್ಷ ಉಮರ್ ಷರೀಫ್ ವಿಶ್ವಕ್ಕೆ ಶಾಂತಿ ಸಂದೇಶ ಕುರಿತು ಪ್ರವಚನ ನೀಡಲಿದ್ದಾರೆ. ಹೊಸಳ್ಳಿ ಮಹಾಯೋಗಿ ಸಂಸ್ಥಾನಮಠದ ವೇಮನಾನಂದ ಮಹಾಸ್ವಾಮಿ, ಬಳ್ಳಾರಿ ಧರ್ಮ ಕ್ಷೇತ್ರದ ಪಿ.ಆಂಥೋನಿ ರಾಜ್ ಆಗಮಿಸುವರು. ಬಿಜಾಪುರದ ಎಐಆರ್‌ಎಫ್ ಅಧ್ಯಕ್ಷ ಶೇಖ್ ಬಷೀರ್ ಅಹ್ಮದ್ ಉಮ್ರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಶಾಸಕ ವೆಂಕಟರಾವ್ ನಾಡಗೌಡ, ಮಾಜಿ ಸಂಸದ ಕೆ. ವಿರೂಪಾಕ್ಷಪ್ಪ, ಮಾಜಿ ಶಾಸಕ ಹಂಪನಗೌಡ ಬಾದಲರ್, ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ಅರಳಿ ನಾಗರಾಜ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಶಿವನಗೌಡ ಗೊರೇಬಾಳ, ಕೆ.ಜೆ.ಪಿ. ರಾಜಶೇಖರ ಪಾಟೀಲ್ ಭಾಗವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement