ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

3ರಂದು ಜನತಾಂತ್ರಿಕ ಮುಸ್ಲಿಂ ಸಮಾವೇಶ

Lingaraj Badiger
Updated On : 1 Feb 2013, 11:14 am

ರಾಯಚೂರು: ನಗರದಲ್ಲಿ ಕೋಮು ಸೌಹಾರ್ದತೆ ಮತ್ತು ಪ್ರಜಾತಾಂತ್ರಿಕ ಹಕ್ಕುಗಳ ಕುರಿತು ಜನಸಂಗ್ರಾಮ ಪರಿಷತ್ ನಿಂದ ಫೆ. 3ರಂದು ಜನತಾಂತ್ರಿಕ ಮುಸ್ಲಿಂ ಸಮಾವೇಶವನ್ನು ಆಯೋಜಿಸಲಾಗಿದೆ.
ನಗರದ ಟಿಪ್ಪು ಸುಲ್ತಾನ್ ರಸ್ತೆಯ ಅತ್ತನೂರು ಫಂಕ್ಷನ್ ಹಾಲ್‌ನಲ್ಲಿ ಅಂದು ಬೆಳಗ್ಗೆ 10.30ಕ್ಕೆ ಸಮಾವೇಶದಲ್ಲಿ ಸಾಂಪ್ರದಾಯಿಕ ಸದ್ಭಾವನೆ ತೊಡಕುಗಳು ಎಂಬ ವಿಷಯದ ಕುರಿತು ನವದೆಹಲಿಯ ಫೈಸಲ್ ಖಾನ್ ಮಾತನಾಡಲಿದ್ದಾರೆ. ಇಸ್ಲಾಮೋಫೋಬಿಯಾ ಇನ್ ಸೆಕ್ಯುಲರ್ ಇಂಡಿಯಾ ಎಂಬ ವಿಷಯದ ಬಗ್ಗೆ ಹಿರಿಯ ವಕೀಲ ಮಹ್ಮದ್ ಶೋಯೇಬ್ ಮಾತನಾಡುವರು. ಮುಸ್ಲಿಮರ ಸಾಮಾಜಿಕ ಸಮಸ್ಯೆಗಳು ಮತ್ತು ಪರಿಹಾರದ ದಾರಿ ಕುರಿತು ಸಾಮಾಜಿಕ ಕಾರ್ಯಕರ್ತ ರಿಯಾಜ್ ಫಾರೂಖಿ ಉಪನ್ಯಾಸ ನೀಡಲಿದ್ದಾರೆ.
ಶಿಕ್ಷಣದ ಮಹತ್ವದ ಕುರಿತು ಶಿಕ್ಷಣ ತಜ್ಞ ಡಾ.ಮೌಲಾನಾ ಅಖ್ಲಾಖ್ ಶರ್ಫಿ ವಿಷಯ ಮಂಡಿಸುವರು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಲು ಜನಸಂಗ್ರಾಮ ಪರಿಷತ್ತಿನ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement