ದುರ್ಗಾಕ್ಯಾಂಪ್: ಶಾಲಾ ಕೊಠಡಿ ಉದ್ಘಾಟನೆ
ಸಿಂಧನೂರು: ತಾಲೂಕಿನ ದುರ್ಗಾ ಕ್ಯಾಂಪಿನಲ್ಲಿ 2011- 12ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ನಿರ್ಮಾಣವಾದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲಾ ಕೊಠಡಿಯನ್ನು ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕ ಪ್ರತಾಪಗೌಡ ಪಾಟೀಲ್ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಶಾಲೆಯ ಜೀರ್ಣೋದ್ಧಾರಕ್ಕಾಗಿ ಕೊಠಡಿಗಳನ್ನು ನೀಡಿದ್ದು ಮೂಲ ಸೌಲಭ್ಯ ಒದಗಿಸಲು ಶ್ರಮಿಸುತ್ತೇನೆ. ಸರ್ಕಾರದ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಂಡು ಗ್ರಾಮವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.
ತಾಪಂ ಅಧ್ಯಕ್ಷೆ ಬಸಮ್ಮ ಸರಸ್ವತಿ ಪೂಜೆ ನೆರವೇರಿದರು. ಅಧ್ಯಕ್ಷತೆಯನ್ನು ಎಸ್ಡಿಎಂಸಿ ಅಧ್ಯಕ್ಷ ಎನ್.ಶ್ರೀನಿವಾಸ್ ವಹಿಸಿದ್ದರು. ಬಿಇಒ ವೃಷಭೇಂದ್ರಯ್ಯಸ್ವಾಮಿ, ಮುಖ್ಯಗುರು ಶಾಂತಪ್ಪ, ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಅಜೇಯಕುಮಾರ ನಾಡಗೌಡ, ಮುಖಂಡ ಶೇಖರಪ್ಪ ಮೇಟಿ, ಶಂಕರರಾವ್, ಕಂಟೆಪ್ಪ ನಾಯ್ಕ, ಶೇಖರಪ್ಪ ಕಾರಲಕುಂಟಿ, ಕೋಮಾರೆಪ್ಪ, ಚಿಟ್ಟಿಬಾಬು ಶಿವರಾಜ ಮತ್ತಿತರರು ಪಾಲ್ಗೊಂಡಿದ್ದರು.
ಸನ್ಮಾನ: ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರಿಗೂ, ತಾಪಂ ಅಧ್ಯಕ್ಷರಿಗೆ, ಅತಿಥಿಗಳಿಗೆ ಗ್ರಾಮದ ವತಿಯಿಂದ ಸನ್ಮಾನಿಸಲಾಯಿತು.