ವೆಂಕಟೇಶ್ವರ ದೇವಾಲಯ ಶಂಕುಸ್ಥಾಪನೆ
ರಾಯಚೂರು: ಮಾನವಿ ತಾಲೂಕಿನ ಸಿರವಾರ ಪಟ್ಟಣದಲ್ಲಿ ಗುರುವಾರ ಶ್ರೀವೆಂಕಟೇಶ್ವರ ದೇವಸ್ಥಾನದ ನಿರ್ಮಾಣಕ್ಕೆ ಉಡುಪಿಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥರು ಶಂಕುಸ್ಥಾಪನೆ ನೆರವೇರಿಸಿದರು.
ಪಟ್ಟಣದ ಹರೇ ಶ್ರೀನಿವಾಸ್ ಟ್ರಸ್ಟ್ ವತಿಯಿಂದ ಆರ್.ಕೆ. ಕಮಲಮ್ಮ ಕಾಲನಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ದೇವಾಲಯಕ್ಕೆ ಶ್ರೀಗಳು ಶಂಕುಸ್ಥಾಪನೆ ನೇರವೇರಿಸಿ ಮಾತನಾಡಿ, ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ದೇವರ ಆರಾಧನೆ ಮಾಡುವುದು ದೇವಾಲಯ ನಿರ್ಮಾಣದ ಮೂಲ ಆಶಯವಾಗಿದೆ ಎಂದರು. ದೇವಾಲಯ ನಿರ್ಮಾಣಕ್ಕೆ ಜಾಗೆ ನೀಡಿದ ಟ್ರಸ್ಟ್ ಅಧ್ಯಕ್ಷ ಆರ್.ಕೆ. ಚನ್ನಬಸವ ಸಾಹುಕಾರ್ ಅವರನ್ನು ಶ್ರೀಗಳು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ವೆಂಕಟರಾವ ಕುಲಕರ್ಣಿ ವಕೀಲರು, ನಿವೃತ್ತ ಶಿಕ್ಷಕ ವೆಂಕಟರಾವ್, ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಜೆ.ಶರಣಪ್ಪಗೌಡ,ತಾಪಂ ಸದಸ್ಯ ಸಿದ್ರಾಮಯ್ಯಸ್ವಾಮಿ, ಶಿವಾಜಿರಾವ್ ದರ್ಶನಕರ್, ಕೃಷ್ಣಾಜಿರಾವ್ ಸೂರ್ಯವಂಶಿ ಸೇರಿದಂತೆ ಅನೇಕರಿದ್ದರು.