ನಾಳೆಯಿಂದ ಪರೀಕ್ಷೆ; ನಿಷೇಧಾಜ್ಞೆ
ರಾಯಚೂರು: ನಗರದಲ್ಲಿ ಜು. 2ರಿಂದ 12ರವರೆಗೆ ನಡೆಯಲಿರುವ ಡಿ.ಇಡಿ ಮತ್ತು ಡಿಪಿ.ಇಡಿ ವಾರ್ಷಿಕ ಪರೀಕ್ಷೆಗಳ ಹಿನ್ನೆಲೆ ಪರೀಕ್ಷೆಯಲ್ಲಿ ಅಕ್ರಮ ತಡೆಗೆ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಜಿಲ್ಲಾಧಿಕಾರಿ ನಾಗರಾಜು ಅವರು ಆದೇಶ ಹೊರಡಿಸಿದ್ದು, ಕೇಂದ್ರಗಳಲ್ಲಿ ನಕಲು ಮತ್ತು ಅವ್ಯವಹಾರಗಳು ನಡೆಯುವುದನ್ನು ತಡೆಯುವ ಉದ್ದೇಶದಿಂದ ಸದರಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ.