ಕುಡಿವ ನೀರಿನ ಘಟಕ ಉದ್ಘಾಟನೆ
ಸಿಂಧನೂರು: ತಾಲೂಕಿನ ಭೂತಲದಿನ್ನಿಯಲ್ಲಿ ಹೈದ್ರಾಬಾದ್ನ ಸ್ಮಾರ್ಟ್ ಕಂಪನಿ ಹಾಗೂ ಗ್ರಾಪಂ ಸಂಯುಕ್ತಾಶ್ರಯಲ್ಲಿ 14 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಹಲವಾರು ದಶಕಗಳಿಂದ ಇಲ್ಲಿಯ ಜನತೆ ಫ್ಲೋರೈಡ್ಯುಕ್ತ ನೀರನ್ನು ಕುಡಿಯುತ್ತಿದ್ದರು. ಹೈದ್ರಾಬಾದ್ನ ಸ್ಮಾರ್ಟ್ ಕಂಪನಿ ಹಾಗೂ ಗ್ರಾಪಂ.ನ ತಲಾ 7 ಲಕ್ಷ ವೆಚ್ಚದಲ್ಲಿ ಶುದ್ಧ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಗ್ರಾಮಸ್ಥರಿಗೆ ಕೇವಲ 4ಕ್ಕೆ 20 ಲೀಟರ್ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ. ಇದರ ನಿರ್ವಹಣೆಯನ್ನು ಸ್ಮಾರ್ಟ್ ಕಂಪನಿಯೇ ನಿಭಾಯಿಸಲಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ಟಿ.ಕುಮಾರಸ್ವಾಮಿ, ತಾಪಂ ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ತಾಪಂ ಇಒ ರಮೇಶ ತಳವಾರ, ಜಿಪಂ ಸದಸ್ಯರಾದ ಚಂದೂಸಾಬ್ ಮುಳ್ಳೂರು, ಶಿವನಗೌಡ ಎಲೆಕೂಡ್ಲಿಗಿ, ಕಾಂಗ್ರೆಸ್ ಮುಖಂಡ ಮಲ್ಲನಗೌಡ ಕನ್ನಾರಿ, ಎಪಿಎಂಸಿ ನಿರ್ದೇಶಕ ಮಲ್ಲನಗೌಡ ಮೇಟಿ, ಗ್ರಾಪಂ ಅಧ್ಯಕ್ಷ ತಿಮ್ಮಪ್ಪ ನಾಯಕ, ಪಿಡಿಒ ನರಸಿಂಹರಾವ್ ಕುಲಕರ್ಣಿ ಇದ್ದರು.