ಪಡಿತರ ಚೀಟಿ: ಹೆಚ್ಚುವರಿ ಕೇಂದ್ರಕ್ಕೆ ಆಗ್ರಹ
ದೇವದುರ್ಗ: ತಾಲೂಕಿನ ಅರಕೇರಾ ಗ್ರಾಪಂ ವ್ಯಾಪ್ತಿಯಲ್ಲಿ ಪಡಿತರ ಚೀಟಿ ವಿತರಣೆಯ ಹೆಚ್ಚುವರಿ ಕೇಂದ್ರ ತೆರೆಯುವಂತೆ ಗ್ರಾಮದ ಮುಖಂಡರಾದ ವೆಂಕೋಬ ನಾಯಕ ಒತ್ತಾಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಈಗಾಗಲೇ ಅರಕೇರಾ ಗ್ರಾಮದಲ್ಲಿ ಒಂದು ಪಡಿತರ ಚೀಟಿ ವಿತರಣೆ ಕೇಂದ್ರ ಕಾರ್ಯನಿರ್ವಹಿಸುತ್ತಿದೆ. ಆದರೆ ದಿನವೂ ನೂಕುನುಗ್ಗಲು ಪರಿಸ್ಥಿತಿಯಿದ್ದು, ಬಡ ಕೂಲಿಕಾರರು, ಕೃಷಿ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಭಾಗದಲ್ಲಿದ್ದು, ಕೆಲಸ ಬಿಟ್ಟು ಪಡಿತರ ಚೀಟಿಗೆ ದಿನವಿಡೀ ಕಾಯುವಂತಾಗಿದೆ. ಕೂಡಲೇ ಆಡಳಿತ ಅಗತ್ಯ ಸಂಖ್ಯೆಯ ಕೇಂದ್ರ ತೆರೆಯುವಂತೆ ಆಗ್ರಹಿಸಿದ್ದಾರೆ.
ನಾಳೆಯಿಂದ ಸಂದರ್ಶನ
ರಾಯಚೂರು: ಪ್ರಸಕ್ತ ಸಾಲಿನ ಮೂನೇ ಸೆಮಿಸ್ಟರ್ ಲ್ಯಾಟರಲ್ ಎಂಟ್ರಿ ಸ್ಕೀಂ ಅಡಿ ಐಟಿಐ ಪ್ರವೇಶಕ್ಕೆ ಅರ್ಜಿ ಸಲ್ಲಿಸಿದವರ ಸಂದರ್ಶನವನ್ನು ಜು.4ರಂದು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9ರಿಂದ ಸಂಜೆ 6ರವರೆಗೆ ಸಂದರ್ಶನ ಆಯೋಜಿಸಿದ್ದು, ಮೆರಿಟ್ ಸಂಖ್ಯೆ 1ರಿಂದ 150ರವರೆಗೆ ಸಂದರ್ಶನ ನಡೆಯಲಿದೆ. ಜು.5ರಂದು ಮೆರಿಟ್ ಸಂಖ್ಯೆ 151ರಿಂದ ಕಡೆಯ ಮೆರಿಟ್‌ವರೆಗೆ ಪ್ರವೇಶ ಪ್ರಕ್ರಿಯೆಯ ಸಂದರ್ಶನ ನಡೆಯಲಿದೆ ಎಂದು ಐಟಿಐ ಕಾಲೇಜು ತಿಳಿಸಿದೆ.
ನಗರದ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಸಂದರ್ಶನ ನಡೆಯಲಿದ್ದು, ಸಂದರ್ಶನಕ್ಕೆ ಹಾಜರಾಗುವ ವಿದ್ಯಾರ್ಥಿಗಳು ಎಲ್ಲ ಮೂಲ ದಾಖಲೆ ಹಾಗೂ ಎರಡು ಸೆಟ್ ಜೆರಾಕ್ಸ್ ಪ್ರತಿ ಮತ್ತು ನಾಲ್ಕು ಫೋಟೋ, ಶುಲ್ಕದೊಂದಿಗೆ ಪಾಲ್ಗೊಳ್ಳಬೇಕೆಂದು ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಕಟಣೆ ತಿಳಿಸಿದೆ.