ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶ್ರೀಶೈಲ ರಥಯಾತ್ರೆಗೆ ಸ್ವಾಗತ

Lingaraj Badiger
Updated On : 3 Jul 2013, 11:38 am

ಸಿಂಧನೂರು: ಶ್ರೀಶೈಲ ಕ್ಷೇತ್ರದ ಭ್ರಮರಾಂಭ ಮಲ್ಲಿಕಾರ್ಜುನಸ್ವಾಮಿ ಕಲ್ಯಾಣ ಮಹೋತ್ಸವ ನಿಮಿತ್ತ ಮಹಾರಾಷ್ಟ್ರದಿಂದ ಆಗಮಿಸಿದ ರಥಯಾತ್ರೆಯನ್ನು ವೀರಶೈವ ಸಮಾಜದವರು ಮಂಗಳವಾರ ಅದ್ಧೂರಿಯಾಗಿ ಸ್ವಾಗತಿಸಿದರು.
ನಗರದ ಕೋಟೆ ಶ್ರೀಬಸವ ಕಲ್ಯಾಣ ಮಂಟಪದಿಂದ ಪ್ರಮುಖ ಬೀದಿಗಳಿಂದ ಬಾಜಾ ಭಜಂತ್ರಿ ಸುಮಂಗಲಿಯರ ಹಾಗೂ ವಾದ್ಯ- ವೈಭವಗಳೊಂದಿಗೆ ಮೆರವಣಿಗೆಯ ಮೂಲಕ ಸತ್ಯಾ ಗಾರ್ಡನ್‌ವರೆಗೆ ನಡೆಯಿತು.
ಮೆರವಣಿಗೆಗೆ ರೌಡಕುಂದಾ ಮರಿಸಿದ್ದಲಿಂಗ ಶಿವಾಚಾರ್ಯರು ಚಾಲನೆ ನೀಡಿದರು. ಇದೇ ವೇಳೆ ಶ್ರೀಶೈಲಂ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಎಸ್. ಚಂದ್ರಶೇಖರ ಅಜಾದ, ಸಂಗಯ್ಯಸ್ವಾಮಿ ಸರಗಣಾಧೀಶ್ವರಮಠ, ಶಾಶ್ವತಸ್ವಾಮಿ ಮುಕ್ಕುಂದಿಮಠ, ಮಲ್ಲನಗೌಡ ಕಾನಿಹಾಳ, ರಾಜಶೇಖರ ಪೊಲೀಸ್ ಪಾಟೀಲ್, ಸಿದ್ರಾಮಪ್ಪ ಮಾಡ ಸಿರವಾರ, ಪಂಪನಗೌಡ ಬಾದರ್ಲಿ, ಕೆ.ಶರಣಪ್ಪ ಟೆಂಗಿನಕಾಯಿ, ಅಶೋಕಗೌಡ ಗದ್ರಟಗಿ, ಶರಣೇಗೌಡ ಬೆನ್ನೂರು, ಮಲ್ಲಯ್ಯಶಾಸ್ತ್ರಿ, ಪ್ರಭುರಾಜ, ವೀರೇಶ ಅಂತರಗಂಗಿ, ಶರಣಯ್ಯಸ್ವಾಮಿ ಮತ್ತಿತರರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement