ಆರ್ಎಸ್ಎಸ್ನಿಂದ ನಿಧಿ ಸಂಗ್ರಹ
ಚಿತ್ತಾಪುರ: ಇಲ್ಲಿಯ ಆರ್ಎಸ್ಎಸ್ ಸ್ವಯಂ ಸೇವಕರಿಂದ ಉತ್ತರಾಖಂಡದ ನೆರೆ ಸಂತ್ರಸ್ತರಿಗೆ ಪರಿಹಾರ ನಿಧಿಯನ್ನು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಿಧಿ ಸಂಗ್ರಹಿಸಲಾಯಿತು. ಈ ನಿಧಿಯನ್ನು ಸಂತ್ರಸ್ತರ ಪರಿಹಾರ ನಿಧಿಗೆ ಕಳಿಸಲಾಯಿತು.
ಆರ್ಎಸ್ಎಸ್ ತಾಲೂಕು ಕಾರ್ಯನಿರ್ವಾಹಕ ಪ್ರಲ್ಹಾದ ವಿಶ್ವಕರ್ಮ ಅವರ ನೇತೃತ್ವದಲ್ಲಿ ಪಟ್ಟಣದ ಕಿರಾಣಿ, ಬಜಾರ್, ಕಪ್ಪಡ ಬಜಾರ್, ಅಂಬೇಡ್ಕರ್ ಚೌಕ್ ಮೂಲಕ ಸ್ಟೇಷನ್ ಪ್ರದೇಶಗಳಲ್ಲಿ ಸಂಚರಿಸಿ ನಿಧಿ ಸಂಗ್ರಹಿಸಲಾಯಿತು.
ಸಯ್ವಂ ಸೇವಕರಾದ ಅಂಬರೇಶ ಸುಲೇಗಾಂವ, ರವಿ ಕುಲಕರ್ಣಿ, ಶರಣು ಜ್ಯೋತಿ, ರವೀಂದ್ರ ಹಡಪದ, ಪ್ರೇಮಕುಮಾರ್, ಶಂಕರಗೌಡ, ಮಲ್ಲು ಕದ್ದರಿಗಿ ಭಾಗವಹಿಸಿದ್ದರು.