ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಗಂಗಾಧರಯ್ಯಗೆ ವೇದಮೂರ್ತಿ ಪ್ರಶಸ್ತಿ ಪ್ರದಾನ

Mainashree
Updated On : 4 Jul 2013, 11:04 am

ಲಿಂಗಸ್ಗೂರು: ತಾಲೂಕಿನ ಸುಕ್ಷೇತ್ರ ಅಮರೇಶ್ವರ ದೇವಸ್ಥಾನದ ಅರ್ಚಕ ಗಂಗಾಧರಯ್ಯಸ್ವಾಮಿ ಅವರಿಗೆ ಜೂ. 25ರಂದು ಜರುಗಿದ ಹುಕ್ಕೇರಿ ಹಿರೇಮಠದ ಲೋಕಾರ್ಪಣೆ ಸಮಾರಂಭದಲ್ಲಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ವೇದಮೂರ್ತಿ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ವೀರಶೈವ ಧರ್ಮದ ವಿಧಿ ವಿಧಾನಗಳನ್ನು ರಾಜ್ಯ ಹಾಗೂ ನೆರೆ ರಾಜ್ಯಗಳಲ್ಲಿ ಪೂಜಾ ಕೈಂಕರ್ಯ ಹಾಗೂ ಗುರು ಪಟ್ಟಾಧಿಕಾರ, ಸಾಮೂಹಿಕ ವಿವಾಹ ಮತ್ತು ಲಿಂಗಧೀಕ್ಷೆ ವಿಧಾನ ಪರಂಪರಾಗತ ಕಾರ್ಯ ಸಲ್ಲಿಸಿದ ಮತ್ತು ಧರ್ಮ, ಆಧ್ಯಾತ್ಮ ಪ್ರವಚನ, ಧರ್ಮದ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವುದನ್ನು ಗುರುತಿಸಿ ಗಂಗಾಧರಯ್ಯ ಸ್ವಾಮಿ ಅವರಿಗೆ ವೇದಮೂರ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರಂಭದಲ್ಲಿ ಸಂಸದ ಸುರೇಶ ಅಂಗಡಿ, ಸಚಿವ ಪ್ರಕಾಶ ಹುಕ್ಕೇರಿ, ಕುಡಚಿ ಶಾಸಕ ಪಿ.ರಾಜೀವ ಸೇರಿದಂತೆ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement