ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಗುಂಡಪ್ಪರ ಸೇವೆ ಅನುಕರಣೀಯ'

Mainashree
Updated On : 4 Jul 2013, 11:04 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಜು.3
ಮೂರು ದಶಕಗಳಿಂದ ತಮ್ಮ ವೃತ್ತಿ ಆರಂಭದಿಂದ ನಿವೃತ್ತಿಯವರೆಗೂ ಗುಂಡಪ್ಪ ಕಟ್ಟಿಮನಿ ಅವಿರತ ಸೇವೆ ಸಲ್ಲಿಸಿದ್ದರು. ಒಂದೆಡೆ ಪ್ರಾಮಾಣಿಕ ಸೇವೆ ಸಲ್ಲಿಸುವ ಮೂಲಕ ಜನತೆ ಹಾಗೂ ಇಲಾಖೆಯ ಮನೆಮಾತಾಗಿದ್ದ ಅವರ ಅವಿರತ ಸೇವೆ ಅನುಕರಣೀಯ ಎಂದು ತುರ್ವಿಹಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮಂಜುನಾಥ ಅಣಗೌಡ್ರ ಹೇಳಿದರು.
ಅವರು ತಾಲೂಕಿನ ತುರ್ವಿಹಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಿವೃತ್ತಿ ಹೊಂದಿದ ಡಿ ಗ್ರೂಪ್ ಸಿಬ್ಬಂದಿ ಗುಂಡಪ್ಪ ಕಟ್ಟಿಮನಿಯವರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಹಾಗೂ ಇಲಾಖೆ ಪ್ರತಿಯೊಬ್ಬ ಅಧಿಕಾರಿ, ಸಿಬ್ಬಂದಿ ವರ್ಗದೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಗುಂಡಪ್ಪನವರ ಸೇವೆಯು ನಿಷ್ಠೆ, ಪ್ರಾಮಾಣಿಕತೆಗೆ ಹಿಡಿದ ಕನ್ನಡಿಯಾಗಿದೆ ಎಂದರು.
ಆರೋಗ್ಯ ಇಲಾಖೆಯ ವೃತ್ತಿಪರರ ಸಂಘದ ತಾಲೂಕಾಧ್ಯಕ್ಷ ಜಿ. ರಂಗನಾಥ, ಅಂದಾನಪ್ಪ ಕೊಟಗಿ, ಸೋಮಶೇಖರ ಮೇಟಿ ಮಾತನಾಡಿದರು. ಈ ಸಂದರ್ಭದಲ್ಲಿ ಇಲಾಖೆಯ ಶಶಿಧರ ಹಳ್ಳಿ, ವೆಂಕಟೇಶ ಕಂದಗಲ್, ಮಂಜುಳಾ ಅಂಗಡಿ, ಹನುಮಂತರಾಯ ಮತ್ತಿತರರು ಅಭಿನಂದಿಸಿದರು. ಇಲಾಖೆಯ ಎಲ್ಲಾ ಸಿಬ್ಬಂದಿ ವರ್ಗ ಶಾಲು ಹೊದಿಸಿ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡುವ ಮೂಲಕ ಅವರನ್ನು ಗೌರವಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement