ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ರಸ್ತೆ ದುರಸ್ತಿಗೆ ಆಗ್ರಹಿಸಿ ಜೈಕರವೇ ಪ್ರತಿಭಟನೆ

Mainashree
Updated On : 4 Jul 2013, 11:04 am

ದೇವದುರ್ಗ: ಪಟ್ಟಣದ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಜೈಕರವೇ ಹಾಗೂ ಜೈಕರವೇ ಆಟೋ ಚಾಲಕರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು.
ಈ ಕುರಿತು ಪುರಸಭೆ ಅಧಿಕಾರಿ ಶ್ರೀಪಾದಭಟ್ ಅವರಿಗೆ ಮನವಿ ಸಲ್ಲಿಸಿ, ಪಟ್ಟಣದ ಎಲ್ಲ ಮುಖ್ಯ ರಸ್ತೆಗಳು, ತೆಗ್ಗು, ದಿನ್ನಿಯಿಂದ ಕೂಡಿವೆ. ಅದರಿಂದ ಪಟ್ಟಣದಲ್ಲಿ ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದೆ. ಕೂಡಲೇ ರಸ್ತೆಗಳ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪಟ್ಟಣದಲ್ಲಿ ರಸ್ತೆ ಅಗಲೀಕರಣ ಕೈಗೊಂಡಿದ್ದು ಕಳೆದ ಎರಡು ಮೂರು ವರ್ಷಗಳಿಂದ ಕನಿಷ್ಠ ಪ್ರಮಾಣದ ಸಂಚಾರಕ್ಕೆ ರಸ್ತೆಗಳ ದುರಸ್ತಿ ಕೈಗೊಂಡಿಲ್ಲ. ಮಳೆ ಬಂದಾಗಲೆಲ್ಲ ರಸ್ತೆಗಳಲ್ಲಿ ಸಂಚರಿಸುವುದು ಕಷ್ಟವಾಗುತ್ತದೆ. ಸಾರ್ವಜನಿಕರ ಸಂಚಾರಕ್ಕೂ ತೊಂದರೆಯಾಗಿದೆ ಎಂದು ಆರೋಪಿಸಿದರು.
ಕೂಡಲೇ ಪಟ್ಟಣದ ಎಲ್ಲ ವಾರ್ಡ್‌ಗಳಲ್ಲಿ ಡಾಂಬರೀಕರಣ ಕೈಗೊಳ್ಳುವಂತೆ ಒತ್ತಾಯಿಸಿದರು. ಈ ವೇಳೆ ಜೈ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ, ಮುನೀರ್ ಪಾಶಾ, ಆಟೋ ಚಾಲಕರ ಸಂಘದ ಅಧ್ಯಕ್ಷ ಖಾದರ್ ಪಾಷಾ, ಎಸ್. ಸಂಜಯ್, ಶಿವಪುತ್ರ ಉಪ್ಪಾರ, ಹನುಮಂತಪ್ಪ, ಜಾನಿಪಾಷಾ, ಕರಿಯಪ್ಪ, ನಜೀರ ಅಹ್ಮದ, ರಫೀಕ್, ಜಹೀರಪಾಷಾ, ರಮೇಶ ಬಾಬು ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement