ಕಾಮಗಾರಿಗಳಿಗೆ ಭೂಮಿಪೂಜೆ
ರಾಯಚೂರು: ತಾಲೂಕಿನ ಚಂದ್ರಬಂಡಾ ಜಿಪಂ ಕ್ಷೇತ್ರದ ವ್ಯಾಪ್ತಿಯಲ್ಲಿ 72.82 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಈಚೇಗೆ ಚಾಲನೆ ನೀಡಲಾಯಿತು. ಕ್ಷೇತ್ರದ ವ್ಯಾಪ್ತಿಯ ಚಂದ್ರಬಂಡಾ, ಕಟ್ಲಟ್ಕೂರು, ಗಣಮೂರು, ಪಲವಲದೊಡ್ಡಿ, ಅರಸಿಗೇರಾ ಮತ್ತು ಅರಸಿಗೇರಾ ತಾಂಡಾಗಳಿಗೆ ಕಿರು ನೀರು ಸರಬರಾಜು ಯೋಜನೆ ಅಡಿ 72.82 ಲಕ್ಷ ವೆಚ್ಚದ ವಿವಿಧ ಕಾಮಗಾರಿಗಳಿಗೆ ಜಿಪಂ ಸದಸ್ಯೆ ಉಮಾದೇವಿ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಜೂರಾದ ಈ ಕಾಮಗಾರಿಗಳ ಸದುಪಯೋಗ ಪಡೆಯಲು ಗ್ರಾಮಸ್ಥರಿಗೆ ಮನವಿ ಮಾಡಿದರು.
ಈ ವೇಳೆ ಗ್ರಾಮಗಳ ಗ್ರಾಪಂ ಸದಸ್ಯರಾದ ಸುನಂದಾ, ಹುಲಿಗೆಪ್ಪ, ತಿಮ್ಮಪ್ಪ, ಸಂಜೀವ, ರವಿ, ಜಯರಾಮರೆಡ್ಡಿ, ರಾಮಪ್ಪ, ವೀರೇಶ್, ತಿಮ್ಮಪ್ಪ, ಗುಂಡಪ್ಪ ಸೇರಿ ಅನೇಕರಿದ್ದರು.