ನಾಳೆ ರೇಣುಕಾಚಾರ್ಯ ಜಯಂತಿ
ರಾಯಚೂರು: ನಗರದಲ್ಲಿ ಜು.6ರಂದು ಜಗದ್ಗುರು ಆದಿ ರೇಣುಕಾಚಾರ್ಯರ ಜಯಂತ್ಯುತ್ಸವ ಮತ್ತು ಸನ್ಮಾನ ಸಮಾರಂಭ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ವೀರಶೈವ ಸಮಾಜದಿಂದ ಆಯೋಜಿಸಿರುವ ಸಮಾರಂಭದ ಸಾನಿಧ್ಯವನ್ನು ಮಟಮಾರಿಯ ಶ್ರೀವೀರಭದ್ರ ಶಿವಾಚಾರ್ಯ ಸ್ವಾಮೀಜಿ, ಶಾಂತಮಲ್ಲ ಶಿವಾಚಾರ್ಯರು ಹಾಗೂ ರಾಚೋಟಿ ವೀರ ಶಿವಾಚಾರ್ಯರು ವಹಿಸುವರು. ಈ ವೇಳೆ ಬೀದರ್‌ನ ಜ್ಞಾನ ಶಿವಯೋಗಾಶ್ರವುದ ರಾಜಶೇಖರ್ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ವೀರಶೈವ ಸಮಾಜದ ಅಧ್ಯಕ್ಷ ಗುಮಗೇರಿ ಮಹಾಂತಗೌಡರು ವಹಿಸುವರು. ಈ ವೇಳೆ ನೂತನ ಶಾಸಕರಾದ ವೆಂಕಟೇಶ ನಾಯಕ, ಹಂಪಯ್ಯ ನಾಯಕ, ಬಾದರ್ಲಿ ಹಂಪನಗೌಡ, ಡಾ.ಶಿವರಾಜ್ ಪಾಟೀಲ್, ಪ್ರತಾಪಗೌಡ ಪಾಟೀಲ್, ಮಾನಪ್ಪ ವಜ್ಜಲ್, ತಿಪ್ಪರಾಜು ಹವಾಲ್ದಾರ್, ಜಿಪಂ ಅಧ್ಯಕ್ಷೆ ಲಲಿತಮ್ಮ ಸೇರಿ ಪ್ರಮುಖರನ್ನು ಸಮಾಜದಿಂದ ಸನ್ಮಾನಿಸಲಾಗುತ್ತದೆ ಎಂದು ತಿಳಿಸಿದೆ.