ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಸ್ಕಿಯಲ್ಲಿ ಆಧಾರ್ ನೋಂದಣಿಗೆ ನೂಕುನುಗ್ಗಲು

Mainashree
Updated On : 6 Jul 2013, 11:47 am

ಮಸ್ಕಿ: ಆಧಾರ್ ಕಾರ್ಡು ಪಡೆಯುವುದು ದಿನದಿಂದ ದಿನಕ್ಕೆ ಕಗ್ಗಂಟಾಗಿ ಪರಿಣಮಿಸುತ್ತಿದ್ದು, ಗ್ರಾಮೀಣ ಭಾಗದ ಜನತೆ ಕಾರ್ಡು ಪಡೆಯಲು ದಿನವಿಡೀ ಸಾಲಾಗಿ ನಿಲ್ಲುವಂಥ ಸ್ಥಿತಿ ಪಟ್ಟಣದಲ್ಲಿ ನಿರ್ಮಾಣವಾಗಿದೆ.
ಪಟ್ಟಣದ ತೇರ್ ಬಜಾರ್ ಹತ್ತಿರದಲ್ಲಿರುವ ಆಧಾರ್ ಕಾಡ್ ವಿತರಣಾ ಕೇಂದ್ರದ ಮುಂದೆ ದಿನವೂ ವೈಯಕ್ತಿಕ ಕೆಲಸ ಬಿಟ್ಟು ಆಧಾರ್ ಕೇಂದ್ರದಲ್ಲಿಯೇ ಕಾಲ ಕಳೆಯುವಂತಾಗಿದೆ. ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಆಧಾರ್ ಕಾರ್ಡ್‌ಗಾಗಿ ಕೇಂದ್ರದ ಮುಂದೆ ಬೆಳಗ್ಗೆಯಿಂದಲೇ ಸರದಿಯಲ್ಲಿ ನಿಲ್ಲುವುದು ತೀರಾ ಸಾಮಾನ್ಯವಾಗಿದೆ.
30 ಸಾವಿರ ಜನಸಂಖ್ಯೆಯಿರುವ ಪಟ್ಟಣದಲ್ಲಿ ಆಧಾರ್ ಕಾರ್ಡ್ ವಿತರಣೆಗೆ ಕೇವಲ ಒಂದು ಕೇಂದ್ರ ಮಾತ್ರ ಸ್ಥಾಪಿಸಿದ್ದು, ಸಮಸ್ಯೆಯನ್ನು ಹೆಚ್ಚಿಸಿದೆ. ಪಟ್ಟಣದಲ್ಲಿ ಕನಿಷ್ಠ ಐದಾರು ವಿತರಣೆ ಕೇಂದ್ರ ತೆರೆಯುವ ಅವಶ್ಯಕತೆಯಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಆತಂಕ ಬೇಡ- ಶಾಸಕ: ಆಧಾರ್ ಯೋಜನೆಯಡಿ ಗುರುತಿನ ಪತ್ರ ವಿತರಣೆ ಮಾಡುವ ಕಾರ್ಯ 2014ರ ಮಾ.31ರವರೆಗೆ ನಡೆಯಲಿದೆ ಎಂದು ಮಸ್ಕಿ ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದ್ದಾರೆ. ಆಧಾರ್ ಕಾರ್ಡ್ ಪಡೆಯಲು ಸದ್ಯ ನೂಕುನುಗ್ಗಲುಂಟಾಗುತ್ತಿದ್ದು, ಜನತೆ ಅನಗತ್ಯ ಆತಂಕಕ್ಕೆ ಸಿಲುಕದೇ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದ್ದಾರೆ. ಗುರುತಿನ ಪತ್ರ ವಿತರಿಸುವ ಕೇಂದ್ರ ತೆರೆಯುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಅಧಿಕಾರಿಗಳೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement