ಪದಾಧಿಕಾರಿಗಳ ಆಯ್ಕೆ
ದೇವದುರ್ಗ: ತಾಲೂಕಿನ ಗಲಗ ಗ್ರಾಮದಲ್ಲಿ ಭಾನುವಾರ ತಾಲೂಕು ಬಿಜೆಪಿ 28 ಗ್ರಾಪಂ.ಗಳ ಸಂಸ್ಥಾನಿಕ ಸಮಿತಿ ರಚನೆ ಹಾಗೂ ಎರಡು ಬ್ಲಾಕ್ ಅಧ್ಯಕ್ಷರ ನೇಮಕ ಸಭೆ ನಡೆಯಿತು. ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ ಶಿವನಗೌಡ ನಾಯಕ, ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ತಮ್ಮ ಸೋಲಿಗೆ ತಮ್ಮ ಹಿತಶತ್ರುಗಳೇ ಕಾರಣ. ತಮ್ಮ ಅಧಿಕಾರವಧಿಯಲ್ಲಿ ಲಾಭ ಪಡೆದ ಜನರು ನಂತರದಲ್ಲಿ ತಮ್ಮ ಸೋಲಿಗೆ ಕಾರ್ಯನಿರ್ವಹಿಸಿದ್ದರು ಎಂದು ಆರೋಪಿಸಿದರು. ಈ ಸಭೆಯಲ್ಲಿ ಬಿಜೆಪಿ ತಾಲೂಕು ಘಟಕದ ಜಾಲಹಳ್ಳಿ ಬ್ಲಾಕ್ ಅಧ್ಯಕ್ಷರಾಗಿ ಬಸವರಾಜ ವಕೀಲರು, ಗೌರವಾಧ್ಯಕ್ಷರಾಗಿ ಸಿದ್ದಣ್ಣ ತಾತಾ ಮುಂಡರಗಿ, ಹಾಗೂ ಗಬ್ಬೂರು ಬ್ಲಾಕ್ ಅಧ್ಯಕ್ಷರಾಗಿ ಕೆ. ಜಂಬಣ್ಣ ನೀಲೋಗಲ್, ಗೌರವ ಅಧ್ಯಕ್ಷರಾಗಿ ಶರಬಣ್ಣ ಸಾಹುಕಾರ ಬೆಳಗುಂಡಿರನ್ನು ನೇಮಿಸಲಾಯಿತು. ಈ ವೇಳೆ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು, ಪಕ್ಷದ ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಜಿಲ್ಲಾ ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ತಿಮ್ಮಯ್ಯ, ತ್ರಿವಿಕ್ರಮ ಜೋಷಿ, ಅಶೋಕಗಸ್ತಿ ಮಾತನಾಡಿದರು. ಪ್ರಮುಖರಾದ ಸಿ.ಎಸ್. ಪಾಟೀಲ್, ಜಿಪಂ ಮಾಜಿ ಸದಸ್ಯ ಡಾ. ಎಚ್.ಎ. ನಾಡಗೌಡ, ಯೂನೂಸ್ ಶಹಾಪೂರಿ, ಶ್ಯಾಮರಾವ್ ಕುಲ್ಕರ್ಣಿ, ಗುಲಾಮ್ ಮಹಿಬೂಬ, ಈರಣ್ಣ ಪಾಣಿ, ಗೋವಿಂದಪ್ಪ ಚಿಂಚೋಡಿ, ಚಂದ್ರಶೇಖರ ಕುಂಬಾರ, ಪುರಸಭೆ ಸದಸ್ಯರಾದ ಸೋಮಕಾರ ವೆಂಕಟೇಶ, ಚಂದ್ರಶೇಖರ ಚಲುವಾದಿ, ಶ್ರೀನಿವಾಸ ಅಬಕಾರಿ ಸೇರಿ ಮುಖಂಡರು ಇದ್ದರು.
ರಿಪೋರ್ಟರ್ಸ್ ಗಿಲ್ಡ್ಗೆ ಆಯ್ಕೆ
ರಾಯಚೂರು: ರಾಯಚೂರು ರಿಪೋರ್ಟಸ್ ಗಿಲ್ಡ್ನ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಭಾನುವಾರ ನಗರದಲ್ಲಿ ನಡೆಯಿತು. ಗಿಲ್ಡ್ ಅಧ್ಯಕ್ಷ ಬಿ.ವೆಂಕಟಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸುರೇಂದ್ರಾಚಾರ್ಯ ಕೊರ್ತಕುಂದಾ- ಅಧ್ಯಕ್ಷರು, ಕೆ.ರಾಮಕೃಷ್ಣ- ಗೌರವಾಧ್ಯಕ್ಷರು, ಚನ್ನಬಸವಣ್ಣ- ಉಪಾಧ್ಯಕ್ಷ, ರಂಗನಾಥ್- ಉಪಾಧ್ಯಕ್ಷ, ಕೆ.ಸತ್ಯನಾರಾಯಣ- ಪ್ರಧಾನ ಕಾರ್ಯದರ್ಶಿ, ಎಚ್.ವೀರನಗೌಡ- ಕಾರ್ಯದರ್ಶಿ, ಅರವಿಂದ ಕುಲ್ಕರ್ಣಿ- ಕೋಶಾಧ್ಯಕ್ಷರು, ಬಿ.ವೆಂಕಟಸಿಂಗ್- ಪದ ನಿಮಿತ್ತ ಸದಸ್ಯರಾಗಿ ಆಯ್ಕೆಯಾದರು.