ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ವಿವಿಧ ಕಾಮಗಾರಿಗೆ ಚಾಲನೆ

Lingaraj Badiger
Updated On : 8 Jul 2013, 11:19 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.7
ತಾಲೂಕಿನ ಯಾಪಲದಿನ್ನಿ ಗ್ರಾಪಂ ವ್ಯಾಪ್ತಿಯ ಮಾಡಮಾನದೊಡ್ಡಿ ಮತ್ತು ಕೊತ್ತದೊಡ್ಡಿ ಗ್ರಾಮಗಳಲ್ಲಿ ಜಿಪಂ ಸದಸ್ಯೆ ಉಮಾದೇವಿ ಅವರು ವಿವಿಧ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದರು.
ಮಾಡಮಾನದೊಡ್ಡಿ ಗ್ರಾಮಕ್ಕೆ 6 ಲಕ್ಷ ಹಾಗೂ ಕೊತ್ತದೊಡ್ಡಿ ಗ್ರಾಮಕ್ಕೆ 4.50 ಲಕ್ಷ ವೆಚ್ಚದ ಕಾಮಗಾರಿಗಳಿಗೆ ಅವರು ಚಾಲನೆ ನೀಡಿ ಬಿಜೆಪಿ ಸರ್ಕಾರದಲ್ಲಿ ಈ ಕಾಮಗಾರಿಗಳಿಗೆ ಮಂಜೂರಾತಿ ದೊರೆತಿತ್ತು. ಯೋಜನೆಯ ಲಾಭ ಪಡೆಯುವಂತೆ ಜನತೆಗೆ ಸಲಹೆ ನೀಡಿದರು.
ಯಾಪಲದಿನ್ನಿ ಗ್ರಾಮಕ್ಕೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೊಳವೆಬಾವಿ ಕೊರೆಯಿಸಲಾಗಿದೆ. ಶೀಘ್ರದಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಯಾಪಲದಿನ್ನಿ ಗ್ರಾಪಂ ಅಧ್ಯಕ್ಷ ತಿಮ್ಮಪ್ಪ, ಶಿವರಾಜ್ ರಾಳದೊಡ್ಡಿ, ರವೀಂದ್ರರೆಡ್ಡಿ, ವೀರೇಶ್, ಹನುಮಂತ ಯಾದವ್ ಸೇರಿ ಅನೇಕರಿದ್ದರು.
--
ನವೋದಯ ಶಾಲೆಗೆ ಆಯ್ಕೆ
ದೇವದುರ್ಗ: ತಾಲೂಕಿನ ಕೋತಿಗುಡ್ಡದ ಹಿರಿಯ ಪ್ರಾಥಮಿಕ ಶಾಲೆಯ 6ನೇ ತರಗತಿ ವಿದ್ಯಾರ್ಥಿ ಆಕಾಶ್ ಸಿಂಗ್ರಿ ಜವಾಹರ ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿದ್ದಾನೆ. ಕಳೆದ ಫೆ.10ರಂದು ನಡೆದ ನವೋದಯ ವಿದ್ಯಾಲಯ ಪ್ರವೇಶ ಪರೀಕ್ಷೆಯಲ್ಲಿ 59ನೇ ರ್ಯಾಂಕ್ ಗಳಿಸಿ ತೇರ್ಗಡೆ ಹೊಂದುವ ಮೂಲಕ ಶಾಲೆಗೆ ಆಯ್ಕೆಯಾಗಿದ್ದಾನೆಂದು ಶಾಲೆಯ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement