ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಪಹರಣಕ್ಕೆ ಒಳಗಾಗಿದ್ದ ಬಾಲಕಿ ಪತ್ತೆ, ಆರೋಪಿ ಸೆರೆ

Lingaraj Badiger
Updated On : 9 Jul 2013, 11:02 am

ಲಿಂಗಸ್ಗೂರು: ತಾಲೂಕಿನ ಗುಂತಗೋಳ ಗ್ರಾಮದಿಂದ ಅಪಹರಣಕ್ಕೆ ಒಳಗಾಗಿದ್ದ 14 ವರ್ಷದ ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಲಿಂಗಸ್ಗೂರು ಪೊಲೀಸರು ಯಶಸ್ವಿಯಾಗಿದ್ದು, ಆರೋಪಿಯನ್ನು ಬಂಧಿಸಿದ್ದಾರೆ. ಗುಂತಗೋಳ ಗ್ರಾಮದ 14 ವರ್ಷದ ಬಾಲಕಿಯನ್ನು 2004 ಏ.28ರಂದು ಗುರುಗುಂಟಾ ಗ್ರಾಮ ಹಾಲವಸ್ತಿ ಗುಂತಗೋಳ ಗ್ರಾಮದ ಮಾನಪ್ಪ ಎಂಬುವವನು ಬಾಲಕಿಗೆ ಮದುವೆಯಾಗುವುದಾಗಿ ನಂಬಿಸಿ ಅಪಹರಿಸಿದ್ದನು. ಆರೋಪಿ ಮಾನಪ್ಪನ ತಂದೆ ಅಮರಪ್ಪ ಹಾಗೂ ತಾಯಿ ಹನುಮವ್ವಳ ಪ್ರಚೋದನೆಯಿಂದ ಅಪಹರಿಸಿಕೊಂಡು ಹೋಗಿರುವುದಾಗಿ ಬಾಲಕಿಯ ತಂದೆ ಸೋಮಪ್ಪ 2011 ಮೇ 14ರಂದು ಲಿಂಗಸ್ಗೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದನು. ಲಿಂಗಸ್ಗೂರು ಠಾಣೆ ಪೋಲೀಸರು ದೂರು ಆಧರಿಸಿ, ಬೆಂಗಳೂರಲ್ಲಿ ವಾಸವಾಗಿದ್ದಾರೆ ಎಂಬ ಸುಳಿವು ಅರಿತು ಆರೋಪಿ ಮತ್ತು ಬಾಲಕಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದು, ಸೋಮವಾರ ಲಿಂಗಸ್ಗೂರು ಠಾಣೆಗೆ ಕರೆ ತಂದಿದ್ದಾರೆ. ಆರೋಪಿ ಮಾನಪ್ಪನನ್ನು ಬಂಧಿಸಲಾಗಿದ್ದು, ಬಾಲಕಿಯನ್ನು ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ಆಕೆಯ ಪಾಲಕರಿಗೆ ಒಪ್ಪಿಸಲಾಗಿದೆ.
ಮಹಿಳೆ ಆತ್ಮಹತ್ಯೆ
ರಾಯಚೂರು: ತಾಲೂಕಿನ ಮಾಮಡದೊಡ್ಡಿ ಗ್ರಾಮದಲ್ಲಿ ಮಾನಸಿಕ ಅಸ್ವಸ್ಥೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮೃತಳನ್ನು ಲಕ್ಷ್ಮೀ(26) ಎಂದು ಗುರುತಿಸಲಾಗಿದೆ. ಈಕೆ ಮಾನಸಿಕ ಅಸ್ವಸ್ಥಳಿದ್ದು ತಲೆನೋವಿನಿಂದ ಬಳಲಿದಾಗ ಮನೆಯಲ್ಲಿದ್ದ ವಿಷ ಸೇವಿಸಿದ್ದು ತೀವ್ರ ಅಸ್ವಸ್ಥಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದ್ಯ ವ್ಯಸನಿ ಸಾವು
ರಾಯಚೂರು: ಮಾನವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ಮದ್ಯ ವ್ಯಸನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಬಸವರಾಜ(38) ಎಂದು ಗುರುತಿಸಲಾಗಿದೆ. ಈತ ವಿಪರೀತ ಮದ್ಯ ಸೇವಿಸುತ್ತಿದ್ದು ಅದರಿಂದ ಬೇಸತ್ತ ಆತನ ಪತ್ನಿ ಮದ್ಯ ಸೇವಿಸಿದರೆ ತವರಿಗೆ ತೆರಳುವುದಾಗಿ ಹೇಳಿದ್ದರಿಂದ ಆತ ಗ್ರಾಮದ ಹೊರ ವಲಯದ ಹೊಲದಲ್ಲಿ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು, ಮಾನವಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಾನವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನಸಂಖ್ಯಾ ದಿನ
ಯಾದಗಿರಿ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜು.11ರಂದು ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement