ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹೇಶಪ್ಪ ನೇಮಕಾತಿ ರದ್ದತಿಗೆ ಆಗ್ರಹ

Lingaraj Badiger
Updated On : 10 Jul 2013, 10:57 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.9
ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದ ಕುಲಪತಿ ಡಾ. ಮಹೇಶಪ್ಪ ಪುನರ್ ನೇಮಕಾತಿ ರದ್ದುಪಡಿಸಲು ಆಗ್ರಹಿಸಿ, ಕಾಮೆಡ್-ಕೆ ಪ್ರವೇಶ ಪ್ರಕ್ರಿಯೆ ಖಂಡಿಸಿ ಸ್ಥಳೀಯ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತಹಸೀಲ್ದಾರ್‌ಗೆ ಮನವಿಪತ್ರ ಸಲ್ಲಿಸಿದರು.
ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಇ. ಮೆಕ್ಯಾನಿಕ್‌ತೃತೀಯ ದರ್ಜೆಯಲ್ಲಿ ಪಾಸಾಗಿರುವ ಮಹೇಶಪ್ಪ ಪ್ರಥಮ ದರ್ಜೆಯಲ್ಲಿ ಪಾಸಾಗಿರುವುದಾಗಿ ಸುಳ್ಳು ದಾಖಲೆ ಒದಗಿಸಿದ್ದಾರೆ. ಅಲ್ಲದೇ ಮೈಸೂರು ವಿವಿಯಿಂದ ಇದುವರೆಗೆ ಕಾನ್ವೋಕೇಷನ್ ಪ್ರಮಾಣ ಪತ್ರವನ್ನೇ ಪಡೆದುಕೊಂಡಿಲ್ಲ. ಹೀಗೆ ಅರ್ಹತೆ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ವಿವಾದಗಳು ಅವರನ್ನು ಸುತ್ತುವರಿದಿವೆ. ಇವರ ವಿರುದ್ಧ ತನಿಖೆ ನಡೆಯುತ್ತಿರುವಾಗಲೇ ಕುಲಪತಿಯಾಗಿ ಪುನಾನೇಮಕ ಮಾಡುವ ಮೂಲಕ ರಾಜ್ಯಪಾಲರು ಶಿಕ್ಷಣ ಕ್ಷೇತ್ರಕ್ಕೆ ಅಪಮಾನ ಮಾಡಿದ್ದಾರೆ. ಕೂಡಲೇ ಕುಲಪತಿ ಸ್ಥಾನದಿಂದ ಅವರನ್ನು ವಜಾಗೊಳಿಸಿ ಸೂಕ್ತ ತನಿಖೆ ನಡೆಸಬೇಕೆಂದು ಕಾರ್ಯಕರ್ತರು ಆಗ್ರಹಿಸಿದರು.
ಖಂಡನೆ: ವೈದ್ಯಕೀಯ ಶಿಕ್ಷಣ ಇಲಾಖೆ ವೈದ್ಯಕೀಯ ವಿದ್ಯಾರ್ಥಿಗಳ ಸೀಟುಗಳ ಪಟ್ಟಿಯನ್ನು ತಡವಾಗಿ ಪ್ರಕಟಿಸಿ ಬಡ ಪ್ರತಿಭಾನ್ವಿತರಿಗೆ ತೊಂದರೆಯುಂಟು ಮಾಡುತ್ತಿದೆ. ಸರ್ಕಾರವು ಶುಲ್ಕವನ್ನು ಹೆಚ್ಚಿಸುವುದಿಲ್ಲ, ಸೀಟನ್ನು ಕಾಮೆಡ್-ಕೆಗೆ ಬಿಟ್ಟುಕೊಡುವುದಿಲ್ಲ ಎಂದು ಹೇಳಿ ಪರೋಕ್ಷವಾಗಿ ಕಾಮೆಡ್-ಕೆಗೆ ಬೆಂಬಲ ನೀಡುತ್ತಿರುವುದು ಖಂಡನೀಯ. ಇದರಿಂದ ಕೌನ್ಸೆಲಿಂಗ್‌ನಿಂದ ಸರ್ಕಾರಿ ಸೀಟು ಪಡೆಯುವ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತದೆ. ಕೂಡಲೇ ಕೌನ್ಸೆಲಿಂಗನ್ನು ರದ್ದುಪಡಿಸಿ ಸರ್ಕಾರಿ ಸಿಇಟಿ ಕೌನ್ಸೆಲಿಂಗ್ ನಡೆಸಿದ ನಂತರ ಸೀಟುಗಳನ್ನು ಹಂಚಬೇಕು ಎಂದು ಆಗ್ರಹಿಸಲಾಯಿತು.
ಎಬಿವಿಪಿ ನಗರ ಕಾರ್ಯದರ್ಶಿ ಮಂಜುನಾಥ, ಶರಣಯ್ಯ ಗುಡದೂರು ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement